ಜೂಜಾಟ: ಆರು ಮಂದಿಯ ಬಂಧನ
ಬೆಂಗಳೂರು, ಮೇ 22: ರಸ್ತೆಯಲ್ಲಿ ಕುಳಿತು ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಬಂಧಿಸಿ 27 ಸಾವಿರ ನಗದು ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಘು (36), ಚಿನ್ನತಂಬಿ (45), ಮಾಯಾ (27), ಸುಬ್ಬರಾಯ (48), ಅಂಥೋನಿ (49), ನಾಗರಾಜು (50) ಬಂಧಿತ ಆರೋಪಿಗಳೆಂದು ಸಿಸಿಬಿ ತಿಳಿಸಿದೆ.
ನಗರದ ಆರ್‌ಎಂಸಿ ಯಾರ್ಡ್ ಒಳಭಾಗ ಗೇಟ್ ನಂ.4 ಹತ್ತಿರ ಕಾಂಪೌಂಡ್ ಪಕ್ಕದ ರಸ್ತೆಯಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು, ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story