ಅಲ್-ಬದ್ರಿಯಾ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್: ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಮೇ 22: ಅಲ್-ಬದ್ರಿಯಾ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ಅಡ್ಡೂರು ಇದರ ವಾರ್ಷಿಕ ಮಹಾ ಸಭೆಯು ಅಡ್ಡೂರು ಜಮಾಅತ್ ಕಮಿಟಿ ಸಭಾಂಗಣದಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಟಿ.ಸೈಯದ್ ತೋಕೂರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅನ್ಸಾರುಲ್ ಮಸಾಕೀನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಸ್ತಾರ್ ಬೊಟ್ಟಿಕ್ಕೆರೆ ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎ.ಕೆ ಅಶ್ರಫ್, ಉಪಾಧ್ಯಾಕ್ಷರಾಗಿ ಟಿ.ಅಹ್ಮದ್ ಬಾವ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ.ಹಿದಾಯತ್ತುಲ್ಲ, ಕಾರ್ಯ ದರ್ಶಿಯಾಗಿ ಅಸ್ತಾರ್ ಬೊಟ್ಟಿಕ್ಕರೆ, ಕೋಶಾಧಿಕಾರಿಯಾಗಿ ಇಬ್ರಾಹೀಂ ಎ.ಕೆ. ಹಾಗೂ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story