ವಾಹನ ತಪಾಸಣೆಗೆ ನಿಲ್ಲಿಸಿದ ವಿದ್ಯಾರ್ಥಿನಿಯ ಸ್ಕೂಟರ್ನಲ್ಲಿ ಸಿಕ್ಕಿದ್ದು ಒಂದೂವರೆ ಕೆಜಿ ಗಾಂಜಾ!
ಸಾಂದರ್ಭಿಕ ಚಿತ್ರ
ಅರಿಕ್ಕೊಡ್(ಕೇರಳ), ಮೇ 23: ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಚಲಾಯಿಸುತ್ತಿದ್ದ ಸ್ಕೂಟರ್ನಲ್ಲಿ ಒಂದೂವರೆ ಕಿಲೊ ಗಾಂಜಾ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ತಟ್ಟಮ್ಮಳ್ ಪಾರಪತ್ತಿಚಾಲ್ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹುಡುಗಿ ಸಿಕ್ಕಿಬಿದ್ದಿದ್ದಳು. ವಿದ್ಯಾರ್ಥಿನಿ ಕೂಡಾ ಆಗಿರುವ ಆಕೆಯ ಸ್ಕೂಟರ್ನಿಂದ ಗಾಂಜಾ ಪತ್ತೆಯಾಗಿದೆ. ಸ್ಕೂಟರ್ನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿಯನ್ನು ಬಾಲಪರಾಧ ಕೋರ್ಟಿಗೆ ಹಾಜರು ಪಡಿಸಿದರು. ಆಕೆಯನ್ನು ಕೋರ್ಟು ಜುವೈನಲ್ ಹೋಮ್ ಗೆ ಕಳುಹಿಸಿತು.
ಬಾಲಕಿಯನ್ನು ಉಪಯೋಗಿಸಿ ಗಾಂಜಾ ಕಳ್ಳಸಗಾಟ, ಮಾರಾಟ ಮಾಡುತ್ತಿರುವ ಪ್ರಧಾನ ಆರೋಪಿಯನ್ನು ಪೊಲೀಸರು ಈಗ ಹುಡುಕುತ್ತಿದ್ದಾರೆ.
ಸಣ್ಣ ಮಕ್ಕಳನ್ನು ಉಪಯೋಗಿಸಿ ಗಾಂಜಾ ಮಾರಾಟ ನಡೆಯುತ್ತಿದೆ. ಆದ್ದರಿಂದ ಅಧ್ಯಾಪಕರು ಮತ್ತು ಹೆತ್ತವರು ಎಚ್ಚರವಹಿಸಬೇಕೆಂದು ಪೊಲೀಸರು ವಿನಂತಿಸಿದ್ದಾರೆ.
Next Story