12 ಕೋಟಿ ಮೌಲ್ಯದ ಹಾವಿನ ವಿಷ ವಶಕ್ಕೆ: ಓರ್ವನ ಬಂಧನ

ಪಶ್ಚಿಮ ಬಂಗಾಳ, ಮೇ 23: ಎರಡು ಕಂಟೈನರ್ ನಲ್ಲಿದ್ದ ಸುಮಾರು 12 ಕೋಟಿ. ಮೌಲ್ಯದ ಹಾವಿನ ವಿಷವನ್ನು ಬಿಎಸ್ ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕುಶಮಂಡಿ ಅರಣ್ಯ ಇಲಾಖೆ ಹಾಗೂ ಬಿಎಸ್ ಎಫ್ ದಕ್ಷಿಣ ದಿನಾಜ್ ಪುರ್ ಪ್ರದೇಶದಲ್ಲಿ ದಾಳಿ ನಡೆಸಿದ್ದು, ಕಂಟೈನರ್ ಗಳಲ್ಲಿದ್ದ ವಿಷವನ್ನು ವಶಪಡಿಸಿಕೊಂಡು, ಸುಬೇದ್ ಟಿಗ್ಗಾ ಎಂಬಾತನನ್ನು ಬಂಧಿಸಿದೆ. ವಶಪಡಿಸಿಕೊಂಡ ವಿಷದ ಮೊತ್ತ ಸುಮಾರು 12 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಭಾರತದಿಂದ ಬಾಂಗ್ಲಾದೇಶಕ್ಕೆ ಇದನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
Next Story





