ಯೋಗದೀಪಿಕಾ ವಿದ್ಯಾಪೀಠ ಪ್ರವೇಶಕ್ಕೆ ಅರ್ಜಿ ಆಹ್ವಾನ
ಉಡುಪಿ, ಮೇ 23: ಪಲಿಮಾರು ಮೂಲಮಠದಲ್ಲಿರುವ ಯೋಗದೀಪಿಕಾ ವಿದ್ಯಾಪೀಠದಲ್ಲಿ ವೇದ, ಸಂಸ್ಕೃತ, ಜ್ಯೋತಿಷ್ಯ, ಪೌರೋಹಿತ್ಯ ಹಾಗೂ ಆಗಮ ಶಾಸ್ತ್ರಗಳ ಉಚಿತ ಶಿಕ್ಷಣಕ್ಕೆ ಆಸಕ್ತ ವಿಪ್ರ ಸಮಾಜದ ವಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರಕಾರದಿಂದ ನಡೆಯುವ ಪ್ರವರ-ಪ್ರವೀಣ ಪರೀಕ್ಷೆಗಳಿಗೆ ಹಾಗೂ ಶಾಸ್ತ್ರಾಧ್ಯಯನದೊಂದಿಗೆ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧಗೊಳಿಸಲಾಗುವುದು. ಪ್ರವೇಶ ಬಯಸುವ ವಟುಗಳು, ಹೆಸರು, ಪೂರ್ಣವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ಗುರುಮಠ, ವೇದಶಾಖೆ ಮತ್ತು ಈವರೆಗಿನ ವಿದ್ಯಾಭ್ಯಾಸದ ವಿವರಗಳೊಂದಿಗೆ ಅರ್ಜಿಯನ್ನು ಕಾರ್ಯದರ್ಶಿಗಳು, ಯೋಗದೀಪಿಕಾ ವಿದ್ಯಾಪೀಠ ಪಲಿಮಾರು ಮಠ, ಉಡುಪಿ-574101, ದೂ.ಸಂ. 0820- 2523402 ಇಲ್ಲಿಗೆ ಅಥವಾ ಪ್ರಾಂಶುಪಾಲರು, ಯೋಗದೀಪಿಕಾ ವಿದ್ಯಾಪೀಠ, ಪಲಿಮಾರು ಮಠ, ಪಲಿಮಾರು-574112. ಈ ವಿಳಾಸಕ್ಕೆ ಮೇ 30ರೊಳಗೆ ಸಲ್ಲಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.
Next Story





