Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿಗೆ ಇನ್ನು 4 ದಿನಗಳಿಗೊಮ್ಮೆ ನೀರು...

ಉಡುಪಿಗೆ ಇನ್ನು 4 ದಿನಗಳಿಗೊಮ್ಮೆ ನೀರು ಪೂರೈಕೆ

ವಾರ್ತಾಭಾರತಿವಾರ್ತಾಭಾರತಿ23 May 2017 8:26 PM IST
share

ಉಡುಪಿ, ಮೇ 23: ನಿರೀಕ್ಷಿತ ಮಳೆ ಸುರಿಯದಿರುವುದರಿಂದ ಹಾಗೂ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಎ. 29ರಂದೇ ಬರಿದಾಗಿರುವುದರಿಂದ ಉಡುಪಿ ನಗರಕ್ಕೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ.

ಬಜೆ ಅಣೆಕಟ್ಟಿನ ನೀರು ಬರಿದಾದ ಬಳಿಕ ಶೀರೂರು, ಮಾಣೈ ಮಠದ ಗುಂಡಿ, ಭಂಡಾರಿಬೆಟ್ಟು, ಪುತ್ತಿಗೆ ಮಠ ಪ್ರದೇಶದ ಅಲ್ಲಲ್ಲಿ ಗುಂಡಿಗಳಲ್ಲಿ ಸಂಗ್ರಹವಿದ್ದ ನೀರನ್ನು ಬೋಟ್ ಪಂಪುಗಳ ಮುಖಾಂತರ ಪಂಪಿಂಗ್ ಮಾಡಿ ಜಲಾಶಯಕ್ಕೆ ನೀರು ಹಾಯಿಸಿ ಶುದ್ಧೀಕರಣಗೊಳಿಸಿ ಇಂದಿನವರೆಗೆ ದಿನ ಬಿಟ್ಟು ದಿನ ನೀರನ್ನು ನಗರಸಭಾ ವ್ಯಾಪ್ತಿಗೆ ನೀಡಲಾಗಿದೆ.

ಅಣೆಕಟ್ಟು ಪ್ರದೇಶದಲ್ಲಿ ಅಲ್ಲಲ್ಲಿ ಹೊಂಡದಲ್ಲಿರುವ ನೀರು ಉಡುಪಿ ನಗರಕ್ಕೆ ಕೇವಲ 7 ದಿನಗಳಿಗೆ ಮಾತ್ರ ಸಾಕಾಗುವುದರಿಂದ ಹಾಗೂ ನಿರೀಕ್ಷಿತ ಮಳೆ ಕೂಡಾ ಇನ್ನೂ ಬಾರದಿರುವುದರಿಂದ ಮಳೆಗಾಲ ಪ್ರಾರಂಭವಾಗುವ ತನಕ ಉಡುಪಿ ನಗರದ 35 ವಾರ್ಡ್‌ಗಳನ್ನು 2 ವಿಭಾಗಗಳಾಗಿ ವಿಂಗಡಿಸಿ ಸಂಬಂಧ ಪಟ್ಟ ವಾರ್ಡ್‌ಗಳಿಗೆ ಪ್ರತಿ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲು ನಿರ್ಧರಿಸಲಾಗಿದೆ ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

ಅದರಂತೆ ಮೇ 24, 28, ಜೂ.1 ಹಾಗೂ ಜೂನ್ 5ರಂದು ಕೊಳ, ವಡಭಾಂಡೇಶ್ವರ, ಮಲ್ಪೆಸೆಂಟ್ರಲ್, ಕೊಡವೂರು, ಕಲ್ಮಾಡಿ, ಕಸ್ತೂರ್ಬಾನಗರ, ಸಗ್ರಿ, ಮೂಡುಪೆರಂಪಳ್ಳಿ, ಇಂದಿರಾನಗರ, ಚಿಟ್ಪಾಡಿ, ಬಡಗುಬೆಟ್ಟು, ಇಂದ್ರಾಳಿ, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಅಜ್ಜರಕಾಡು, ಕಿನ್ನಿಮುಲ್ಕಿ, ಬೈಲೂರು, ಒಳಕಾಡು, ತೆಂಕಪೇಟೆ, ಕುಂಜಿಬೆಟ್ಟು ವಾರ್ಡುಗಳಿಗೆ ಸರಬರಾಜು ಮಾಡಲಾಗುವುದು.

ಅದೇ ರೀತಿ ಮೇ 27, 31, ಜೂ.4 ಹಾಗೂ ಜೂ.8ರಂದು ಸರಳೆಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ ವಾರ್ಡುಗಳಿಗೆ ನೀರು ಪೂರೈಕೆಯಾಗಲಿದೆ.
 

 ಈ ನಡುವೆ ಮಳೆಗಾಲ ಪ್ರಾರಂಭವಾದರೆ ಕುಡಿಯುವ ನೀರನ್ನು ಹಿಂದಿನಂತೆ ಪ್ರತಿದಿನ ಪೂರೈಸಲಾಗುವುದು. ಕುಡಿಯುವ ನೀರು ಪೂರೈಸಲು ನಿಗದಿಪಡಿಸಿದ ದಿನದಂದು ಸಂಬಂಧಪಟ್ಟ ವಾರ್ಡಿನಲ್ಲಿ ನೀರು ಬಾರದ ಪ್ರದೇಶದಲ್ಲಿ ಅಂದು ಮಾತ್ರ ಆ ಭಾಗದಲ್ಲಿ ಟ್ಯಾಂಕರ್ ನೀರನ್ನು ಪೂರೈಸಲಾಗುವುದು.

ಕುಡಿಯುವ ನೀರಿಗಾಗಿ ಬಹುಮಹಡಿ ಕಟ್ಟಡಗಳನ್ನು ಹೊರತುಪಡಿಸಿ ಗೃಹಬಳಕೆಯವರು ಮಾತ್ರ ದೂರವಾಣಿ ಸಂಖ್ಯೆ: 8496989248, 8496989166, 8496989184, 8496989122ನ್ನು ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್-8496989759, ಪರಿಸರ ಅಭಿಯಂತರ ಬಿ. ರಾಘವೇಂದ್ರ- 9448507244 ಇವರನ್ನು ಸಂಪರ್ಕಿಸಬಹುದು.

ಬಜೆ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿರುವುದರಿಂದ ಉಡುಪಿಯ ನಾಗರಿಕರು ದಯವಿಟ್ಟು ನೀರನ್ನು ಮಿತವಾಗಿ ಬಳಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಹಾಗೂ ಪೌರಾಯುಕ್ತ ಡಿ. ಮಂಜುನಾಥಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X