ಅರ್ಜಿ ಆಹ್ವಾನ
ಉಡುಪಿ, ಮೇ 23: ಕೇಂದ್ರ ಸರಕಾರದಿಂದ ಕಲ್ಯಾಣ ಸಂಸ್ಥೆಗಳಿಗೆ ಕಲ್ಯಾಣ ಯೋಜನೆಯಡಿಯಲ್ಲಿ ಅನಾಥ, ನಿರಾಶ್ರಿತ, ಬಡ ವಿದ್ಯಾರ್ಥಿಗಳಿಗೆ, ನಿರ್ಗತಿಕರಿಗೆ, ಏಡ್ಸ್ ಮತ್ತು ಕುಷ್ಠ ರೋಗಿಗಳಿಗೆ ಹಾಗೂ ಪುನರ್ವಸತಿ ಭಿಕ್ಷುಕರು, ಚಾರಿಟೇಬಲ್ ಸಂಘ-ಸಂಸ್ಥೆಗಳು, ಅಂಧರ ಶಾಲೆಗಳ ಹಾಸ್ಟೆಲ್‌ಗಳು ಇತ್ಯಾದಿ ಉಚಿತ ಊಟದ ಹಾಗೂ ವಸತಿ ವ್ಯವಸ್ಥೆಯನ್ನು ಮಾಡುತ್ತಿರುವ ಅಂತಹ ಅರ್ಹ ಸಂಸ್ಥೆಗಳು ಈವರೆಗೂ ಈ ಯೋಜನೆ ಅಡಿಯಲ್ಲಿ ಅಥವಾ ಬೇರೆ ಯೋಜನೆಯ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯದೆ ಇದ್ದಲ್ಲಿ ಇಂತಹ ನೈಜ ಕಲ್ಯಾಣ ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸೇವಾ ಸಂಸ್ಥೆಗಳು ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಇವರ ಕಚೇರಿ ಅಥವಾ ಆಯಾ ಇಲಾಖೆಗೆ ಸಂಬಂಧಪಡುವ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಅರ್ಜಿ ಯೊಂದಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.





