ಕೇರಳ: ದಕ್ಷಿಣ ರೈಲ್ವೆಯ 6 ಕಂಪ್ಯೂಟರ್ ಗಳ ಮೇಲೆ “ವನ್ನಾಕ್ರೈ” ಅಟ್ಯಾಕ್

ಕೇರಳ, ಮೇ 23: ಮತ್ತೊಂದು “ರ್ಯಾನ್ಸಮ್ ವೇರ್ ಸೈಬರ್ ಅಟ್ಯಾಕ್”ಗೆ ಕೇರಳ ತುತ್ತಾಗಿದ್ದು, ದಕ್ಷಿಣ ರೈಲ್ವೆಯ 6 ಕಂಪ್ಯೂಟರ್ ಗಳು ಹ್ಯಾಕ್ ಆಗಿವೆ. ಆದರೆ ಯಾವುದೇ ಡಾಟಾ ನಷ್ಟವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ರೈಲ್ವೆಯ ತಿರುವನಂತಪುರಂ ವಿಭಾಗದ ಅಕೌಂಟ್ಸ್ ಸೆಕ್ಷನ್ ನ ಆರು ಕಂಪ್ಯೂಟರ್ ಗಳು ದಾಳಿಗೆ ತುತ್ತಾಗಿದ್ದು, ತಕ್ಷಣವೇ ನೆಟ್ ವರ್ಕ್ ವ್ಯವಸ್ಥೆ ಕಡಿತಗೊಂಡಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರೀಕೃತ ಡಾಟಾ ಬೇಸ್ ಮೂಲಕ ಬ್ರೌಸರ್ ಆಧಾರಿತ ಆಂತರಿಕ ಸಾಫ್ಟ್ ವೇರ್ ಮೂಲಕ ಕಂಪ್ಯೂಟರ್ ಗಳು ಕಾರ್ಯನಿರ್ವಹಿಸುತ್ತಿದ್ದು, ದಾಳಿಗೊಳಗಾದ ಯಾವ ಕಂಪ್ಯೂಟರ್ ನಿಂದಲೂ ಮಾಹಿತಿ ನಷ್ಟವಾಗಿಲ್ಲ ಎನ್ನಲಾಗಿದೆ. ರೈಲ್ವೆ ಕಾರ್ಯಾಚರಣೆ ಅಥವಾ ಪ್ರಯಾಣಿಕ ಸೇವೆಯಂತಹ ಯಾವುದೇ ಕಂಪ್ಯೂಟರ್ ಗಳೂ ದಾಳಿಗೆ ತುತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





