ಉನ್ನತ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮಾಹಿತಿ
ಉಡುಪಿ, ಮೇ 23: ಕಳೆದ ಮಾರ್ಚ್ ತಿಂಗಳ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಜಿಲ್ಲೆಯ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಒಬ್ಬರು ಪೋಷಕರಿಗೆ ಮೇ 25ರಂದು ಜಿಪಂ ಡಾ.ವಿ.ಎಸ್.ಆಚಾರ್ಯ ಸಭಾಂಗಣ ರಜತಾದ್ರಿ ಮಣಿಪಾಲ ಇಲ್ಲಿ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಬಗ್ಗೆ ಮಾಹಿತಿ ನೀಡುವ ಕುರಿತು ಕಾರ್ಯಗಾರ ಹಮ್ಮಿ ಕೊಳ್ಳಲಾಗಿದೆ.
ಈ ಕಾರ್ಯಗಾರಕ್ಕೆ ಪಾಸಾದ ವಿದ್ಯಾರ್ಥಿಗಳು ಹಾಗೂ ಒಬ್ಬರು ಪೋಷಕರು ಕಡ್ಡಾಯವಾಗಿ ಹಾಜರಾಗಿ ಮಾಹಿತಿ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
Next Story





