8,000 ಕೋ.ರೂ.ಪಿಎಂಎಲ್‌ಎ ಪ್ರಕರಣ:ಸಿಎಗೆ 3 ದಿನಗಳ ಕಸ್ಟಡಿ

ಹೊಸದಿಲ್ಲಿ,ಮೇ 23: ದಿಲ್ಲಿಯ ಇಬ್ಬರು ಸೋದರರು ಭಾಗಿಯಾಗಿರುವ 8,000 ಕೋ.ರೂ.ಗಳ ಹಣ ಚಲುವೆ ಜಾಲಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಚಾರ್ಟರ್ಡ್ ಅಕೌಂಟಂಟ್ ರಾಜೇಶ್ ಅಗರವಾಲ್‌ರನ್ನು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮಂಗಳವಾರ ಮೂರು ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.
ಅಗರವಾಲ್‌ರನ್ನು ಬಂಧಿಸಿದ್ದ ಇಡಿ ಅವರನ್ನು ನ್ಯಾ.ರೂಬಿ ಅಲ್ಕಾ ಗುಪ್ತಾ ಅವರ ಮುಂದೆ ಹಾಜರು ಪಡಿಸಿ,14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿತ್ತು.
Next Story





