ಹೊಸಂಗಡಿ: ನವವಿವಾಹಿತೆ ನಾಪತ್ತೆ
ಅಮಾಸೆಬೈಲು, ಮೇ 23: ನವವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಹೊಸಂಗಡಿ ಗ್ರಾಮದ ಹಾಡಿಮನೆ ಎಂಬಲ್ಲಿ ನಡೆದಿದೆ.
ಹೊಸಂಗಡಿಯ ಪ್ರಸನ್ನ ಕುಮಾರ್ ಮೇ 8ರಂದು ಪ್ರತಿಮಾ ಎಂಬಾಕೆಯನ್ನು ಸಿದ್ದಾಪುರ ಅನಂತ ಪದ್ಮನಾಭ್ ಸಭಾಗೃಹದಲ್ಲಿ ಮದುವೆಯಾಗಿದ್ದು, ಮೇ 22 ರಂದು ರಾತ್ರಿ ಪ್ರಸನ್ನ ಕುಮಾರ್ ತನ್ನ ಮಾವ ಮತ್ತು ಪತ್ನಿ ಪ್ರತಿಮಾಳೊಂದಿಗೆ ಮನೆಯಲ್ಲಿರುವಾಗ ಪ್ರತಿಮಾ ಮನೆಯ ಹಿಂದಿನ ಬಾಗಿಲಿನಿಂದ ಹೊರಗೆ ಹೋದವಳು ನಾಪತ್ತೆಯಾಗಿದ್ದಾಳೆ.
ಈಕೆ ಬೂದಿ ಬಣ್ಣದ ಚೂಡಿದಾರ್, ಕಪ್ಪುಬಣ್ಣದ ಪ್ಯಾಂಟು ಧರಿಸಿದ್ದಳು. ಬಿಳಿ ಮೈ ಬಣ್ಣ ಸಾಧರಣ ಮೈಕಟ್ಟು ಸುಮಾರು 5.5 ಅಡಿ ಎತ್ತರ ಹಾಗೂ ಕೋಲು ಮುಖ ಎಂದು ತಿಳಿದುಬಂದಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story