ಬಿಎಸ್ಪಿ ಬೆಂಬಲಿಗನ ಕಗ್ಗೊಲೆ: ಗಲಭೆಪೀಡಿತ ಸಹರಾನ್ಪುರದಲ್ಲಿ ಆತಂಕದ ಪರಿಸ್ಥಿತಿ

ಸಹರಾನ್ಪುರ, ಮೇ 23: ಗಲಭೆಪೀಡಿತ ಪ್ರದೇಶವಾದ ಸಹರಾನ್ಪುರ ಜಿಲ್ಲೆಯಲ್ಲಿ ನಡೆದ ಗಲಭೆಯಲ್ಲಿ ಓರ್ವ ಮೃತಪಟ್ಟಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಬ್ಬೀರ್ ಪುರ ಗ್ರಾಮದಲ್ಲಿ ಮೇಲ್ವರ್ಗದ ಠಾಕೂರರ ಕೆಲ ಮನೆಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ್ದು, ಘಟನೆಯ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದಾಗಿ ಕೆಲ ಸಮಯದ ನಂತರ ಬೊಲೆರೋ ಕಾರಿನಲ್ಲಿದ್ದ ಬಿಎಸ್ಪಿ ಬೆಂಬಲಿಗನೋರ್ವನ ಮೇಲೆ ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿದ್ದು, 24 ವರ್ಷದ ಆಶಿಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ.
ಸಹರಾನ್ಪುರದಲ್ಲಿ ಎಪ್ರಿಲ್ ನಿಂದಲೂ ಜಾತಿ ಗಲಭೆಗಳು ವ್ಯಾಪಕವಾಗಿ ನಡೆಯುತ್ತಿದೆ. ಮೇ 5ರಂದು ರಜಪೂತ ರಾಜ ಮಹಾರಾಣಾ ಪ್ರತಾಪರ ಜನ್ಮ ದಿನಾಚರಣೆಯ ಸಂದರ್ಭವೂ ಗಲಭೆ ನಡೆದಿದ್ದು. ಓರ್ವ ಮೃತಪಟ್ಟು 15 ಮಂದಿ ಗಾಯಗೊಂಡಿದ್ದರು.
Next Story





