ಲಂಡನ್: ಆತ್ಮಹತ್ಯಾ ದಾಳಿ
2005ರಲ್ಲಿ ಲಂಡನ್‌ನ ಸಾರಿಗೆ ವ್ಯವಸ್ಥೆಯ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿಯ ನಂತರದ ಅತ್ಯಂತ ಮಾರಣಾಂತಿಕ ಭಯೋತ್ಪಾದಕ ದಾಳಿಗೆ ಬ್ರಿಟನ್ ಸೋಮವಾರ ತಡರಾತ್ರಿ ಸಾಕ್ಷಿಯಾಗಿದೆ. ಪ್ರಮುಖ ಕೈಗಾರಿಕಾ ನಗರ ಮ್ಯಾಂಚೆಸ್ಟರ್‌ನ ಅರೆನಾವೊಂದರಲ್ಲಿ ಅಮೆರಿಕದ ಖ್ಯಾತ ಪಾಪ್ ಗಾಯಕಿ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಾರ್ಯಕ್ರಮದ ಅಂತ್ಯದಲ್ಲಿ ಆತ್ಮಹತ್ಯಾ ಬಾಂಬರ್‌ನೋರ್ವ ತನ್ನನ್ನೇ ಸ್ಫೋಟಿಸಿಕೊಂಡ ಪರಿಣಾಮ ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 50 ಜನರು ಗಾಯಗೊಂಡಿದ್ದಾರೆ.
Next Story





