ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದಾಯ ಮಹೋತ್ಸವ-2017
ವಿದಾಯ ಮಹೋತ್ಸವ-2017

ಮಂಗಳೂರು, ಮೇ 23: ಕೆಂಜಾರಿನಲ್ಲಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲ್ಲಾ ವಿಭಾಗದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪದವೀಧರ ಮತ್ತು ಸ್ನಾತಕೋತ್ತರ ಪದವೀಧರ) ವಿದ್ಯಾರ್ಥಿಗಳಿಗೆ ವಿದಾಯ ಮಹೋತ್ಸವ-2017 ಎಂಬ ಬೀಳ್ಕೊಡುಗೆಯ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀದೇವಿ ಶಿಕ್ಷಣಸಂಸ್ಥೆಯ ಟ್ರಸ್ಟಿಯಾದ ಪ್ರಿಯಾಂಕಾ ಎನ್ ಶೆಟ್ಟಿ, ಕಾಲೇಜಿನ ನಿರ್ದೇಶಕ ಡಾ. ಕೆ.ಇ.ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕಿ ನಯನಾ ಯಾದವ್ ವಂದಿಸಿದರು.
Next Story