ನಾಳೆಯಿಂದ ಯೋಗ ಪ್ರಶಿಕ್ಷಣ ಶಿಬಿರ
ಮಂಗಳೂರು, ಮೇ 23: ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯ ಮಂಗಳೂರು ವತಿಯಿಂದ ಯೋಗ ಜೀವನ ದರ್ಶನ-2017 ಜಿಲ್ಲಾ ಮಟ್ಟದ ಯೋಗ ಪ್ರಶಿಕ್ಷಣ ಶಿಬಿರಗಳು ಮೇ 25ರಿಂದ 28ರ ವರೆಗೆ ಆಯೋಜಿಸಲಾಗುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಪಿ.ಪಿ. ರಾಮಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಆರು ವಲಯಗಳಲ್ಲಿ ಪ್ರಥಮ ಬಾರಿಗೆ ಏಕಕಾಲದಲ್ಲಿ 14 ವಿಭಾಗಗಳಲ್ಲಿ 37 ಪ್ರಾಥಮಿಕ ಯೋಗಶಿಕ್ಷಣ ಶಿಬಿರಗಳು ನಡೆಯಲಿವೆ. ಶಿಬಿರದಲ್ಲಿ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರ, ಮಕ್ಕಳ, ದಂಪತಿಯ, ಯುವ ಜನರ, ಹಿರಿಯ ನಾಗರಿಕರ, ಚಿಕಿತ್ಸಾತ್ಮಕ, ರೈತರ, ಅಂತಾರಾಷ್ಟ್ರೀಯ ಯೋಗ ಪ್ರಶಿಕ್ಷಣ, ವೈದ್ಯರ ಯೋಗ, ಸಂಘ-ಸಂಸ್ಥೆಗಳಿಗೆ ಯೋಗ ಪ್ರಶಿಕ್ಷಣ ಶಿಬಿರಗಳು ನಡೆಯಲಿವೆ ಎಂದರು.
ಶಾರದಾ ವಿದ್ಯಾಲಯ, ಕೊಂಚಾಡಿ ರಾಮಾಶ್ರಮ ಪ್ರೌಢಶಾಲೆ, ಪದವು ಭಾರತಿ ವಿದ್ಯಾ ಸಂಸ್ಥೆ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಪೊಳಲಿ ರಾಮಕೃಷ್ಣ ತಪೋವನ, ಪೊಳಲಿ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆ, ಪಣಂಬೂರು ಎನ್‌ಎಂಪಿಟಿ ಆಂಗ್ಲ ಮಾಧ್ಯಮ ಶಾಲೆ, ಪೆರ್ಮನ್ನೂರು ಮಂಗಳೂರು ವನ್ ವಿದ್ಯಾಲಯದಲ್ಲಿ ಶಿಬಿರಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಮಂಗಳೂರು ವಲಯ ಸಮಿತಿ ಪ್ರಾಂತ ಸಂಚಾಲಕ ರಮೇಶ್, ಜಿಲ್ಲಾ ಸಂಚಾಲಕ ಶಿವಾನಂದ, ಜಿಲ್ಲಾ ಭಜನಾ ಸಮಿತಿ ಪ್ರಮುಖ್ ಧರಣೀಶ್ ಉಪಸ್ಥಿತರಿದ್ದರು.







