Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿಶ್ವ ಎಂಡಿಆರ್‌ಟಿ ಮಹಾಸಭೆಯ ಸಭಾಪತಿಯಾಗಿ...

ವಿಶ್ವ ಎಂಡಿಆರ್‌ಟಿ ಮಹಾಸಭೆಯ ಸಭಾಪತಿಯಾಗಿ ಡಾ ಆರ್.ಕೆ.ಶೆಟ್ಟಿ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ24 May 2017 5:06 PM IST
share
ವಿಶ್ವ ಎಂಡಿಆರ್‌ಟಿ ಮಹಾಸಭೆಯ ಸಭಾಪತಿಯಾಗಿ ಡಾ ಆರ್.ಕೆ.ಶೆಟ್ಟಿ ಆಯ್ಕೆ

ಮುಂಬೈ, ಮೇ.24: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿನ ಸಮಾಜ ಸೇವಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ, ಡಾ ಆರ್.ಕೆ. ಶೆಟ್ಟಿ ಅಮೇರಿಕಾದ ಫ್ಲೋರಿಡಾ ಅಲ್ಲಿನ ಓರ್‌ಲ್ಯಾಂಡೋದಲ್ಲಿ ನಡೆಯಲಿರುವ ಜಾಗತಿಕ ಮಿಲಿಯನ್ ಡಾಲರ್ ರೌಡ್ ಟೇಬಲ್ (ಎಂಡಿಆರ್ಟಿ) ಆರ್ಥಿಕ ತಜ್ಞರ ಮಹಾಸಭೆಯ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

ಜೂ. 7 ರಂದು ನಡೆಯಲಿರುವ ಸಮಾವೇಶದಲ್ಲಿ ವಿಶೇಷ ಬಾಷಣಕಾರರಾಗಿ ಪಾಲ್ಗೊಂಡು `ಆರ್ಥಿಕ ವ್ಯವಹಾರದಲ್ಲಿ ಹೇಗೆ ತುದಿಗೇರುವುದು ಮತ್ತು ಅಲ್ಲೇ ಹೇಗೆ ವಾಸ್ತವ್ಯವಾಗುವುದು' (How to Reach Top of the Table and Stay there) ವಿಷಯದಲ್ಲಿ ಸಮಾವೇಶವನ್ನುದ್ದೇಶಿಸಿ ಡಾ. ಶೆಟ್ಟಿ ಮಾತನಾಡಲಿದ್ದಾರೆ.

ಎಲ್ಲೈಸಿ ಆಫ್ ಇಂಡಿಯಾದ ಪ್ರತಿಷ್ಠಿತ ಕಾರ್ಪೋರೇಟ್ ಕ್ಲಬ್‌ನ ಸದಸ್ಯತನ ಪಡೆದ ಡಾ. ಶೆಟ್ಟಿ ಅಮೇರಿಕಾದ ಕಾಲೇಜ್‌ನಿಂದ ಎಲ್‌ಯುಟಿಸಿಎಫ್‌ನ ಪದವಿಧರರಾಗಿ ಸುಮಾರು ಇಪ್ಪತ್ತು ವರುಷಗಳಿಂದ ಎಂಡಿಆರ್ಟಿ ಸದಸ್ಯತ್ವ ಪಡೆದಿದ್ದಾರೆ.

 ಅಂತಾರಾಷ್ಟ್ರೀಯ ಖ್ಯಾತಿಯ ಆರ್ಥಿಕ ತಜ್ಞ, ತುಳು ಕನ್ನಡಿಗ ಡಾ ಆರ್.ಕೆ.ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ಕರ್ನಾಟಕದ ಚಿಕ್ಕಮಂಗಳೂರಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು ಅಪ್ಪಿ ಕೆ.ಶೆಟ್ಟಿ ದಂಪತಿ ಪುತ್ರ.

ಡಾ ಆರ್.ಕೆ ಶೆಟ್ಟಿ ಅರ್ಥಶಾಸ್ತ್ರದಲ್ಲಿನ ವಾಣಿಜ್ಯ ಪದವಿ ಗಳಿಸಿ ಹಣಕಾಸು ನಿರ್ವಹಣೆಯಲ್ಲಿ ಡಿಪ್ಲೊಮಾ, ಅಮೇರಿಕಾದ ವಿಮಾ ಕಾಲೇಜಿನಿಂದ ಪದವಿಧರರಾಗಿರುವರು.

ಪ್ರಪಂಚದ ಅತೀ ಶ್ರೇಷ್ಠರಲ್ಲಿ ಅಗ್ರಗಣ್ಯ ವಿತ್ತೀಯ ಸಲಹೆಗಾರ ಪರಮೋಚ್ಛ ಸಂಘಟನೆಯಾದ ಕೋರ್ಟ್ ಆಫ್ ಟೇಬಲ್‌ನ ಹಲವಾರು ಸಾಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂಡಿಆರ್‌ಟಿಯ ವಿಭಾಗೀಯ ಉಪಾಧ್ಯಕ್ಷ (ಡಿವಿಪಿ)ರಾಗಿ ಸೇವೆ ಸಲ್ಲಿಸಲಿರುವ ಭಾರತದ ಪ್ರಥಮ ಎಂಡಿಆರ್‌ಟಿ ಸದಸ್ಯರಾಗಿರುವ ಇವರು ಪ್ರಪಂಚದ ಅತ್ಯುನ್ನತ ಗೌರವದ ಟಾಪ್ ಆಫ್ ದಿ ಟೇಬಲ್ ಪ್ರಶಸ್ತಿಯನ್ನೂ ಮುಡಿಗೇರಿಸಿ ಕೊಂಡ ತುಳುಕನ್ನಡಿಗ.

ಸಮಾಜ ಸೇವೆಯ ಮುಂಚೂನಿಯಲ್ಲಿ ಡಾ ಆರ್‌ಕೆಎಸ್:
 ಆರ್.ಕೆ ಶೆಟ್ಟಿ ತಮ್ಮ ಹುಟ್ಟೂರು ಚಿಕ್ಕಮಂಗಳೂರುನ ಕಂಬಿಹಳ್ಳಿಯಲ್ಲಿ ಶಾಲೆ ಒಂದನ್ನು ನಿರ್ಮಿಸಿ ಶಿಕ್ಷಣ ಪ್ರೇಮಿಯಾಗಿ ಶ್ರಮಿಸುತ್ತಿದ್ದಾರೆ. ಮುಂಬೈ ಯಲ್ಲಿ ಏಷ್ಯಾದ ಅತೀ ದೊಡ್ಡ ಕೊಳಚೆಗೇರಿ ಧಾರಾವಿಯ ಮುನ್ಸಿಪಾಲ್ ಶಾಲೆ, ಆರ್ಥಿಕ ಸಂಕಷ್ಟದಲ್ಲಿರುವ ನುರಾರು ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಪುಸ್ತಕ, ಶೈಕ್ಷಣಿಕ ಸಾಮಾಗ್ರಿ ಹಾಗೂ ಸಮವಸ್ತ್ರ ವಿತರಣೆ ಮಾಡಿ ಶೈಕ್ಷಣಿಕವಾಗಿ ಅಪಾರ ಸೇವೆ ಗೈಯುತ್ತಿದ್ದಾರೆ.

ಬಂಟರ ಸಂಘದ ಉನ್ನತ ಶಿಕ್ಷಣ ಕಟ್ಟಡ ನಿರ್ಮಾಣ ನಿಧಿ ಮತ್ತು ಸಮಾಜ ಕಲ್ಯಾಣ ಯೋಜನೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿರುವರು. ಮುಂಬೈಯ ಜುಹೂ ಜಾಯಂಟ್ಸ್ ಕ್ಲಬ್‌ನ ಸಹಭಾಗಿತ್ವದಲ್ಲಿ ಅಖಿಲ ಭಾರತೀಯ ಸಂಸ್ಥೆಯ ವಿಕಲಾಂಗರಿಗೆ, ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಇವರ ಪ್ರಧಾನ ಸೇವೆಯಾಗಿದೆ.

ಟಾಪ್ ಆಫ್ ದ ಟೇಬಲ್'ಗೆ ಸ್ಪೀಕರ್ ಆಗಿ ಆಯ್ಕೆಯಾದ ಮುಂಬೈಯ ಚಿರಪರಿಚಿತ ಆರ್ಥಿಕ ತಜ್ಞ ಮತ್ತು ಪ್ರಮುಖ ಆದಾಯ ತೆರಿಗೆ ವೃತ್ತಿಪರ ಮೇಧಾವಿ ಆರ್.ಕೆ.ಶೆಟ್ಟಿ ಇವರು ಪತ್ನಿ ಅನಿತಾ ಆರ್.ಶೆಟ್ಟಿ ಮತ್ತು ಮಕ್ಕಳಾದ ತರುಣ್ ಆರ್.ಶೆಟ್ಟಿ ಮತ್ತು ಶ್ವೇತಾ ಆರ್.ಶೆಟ್ಟಿ ಇವರೊಂದಿಗೆ ಸಾಂತಕ್ರೂಜ್ ಪೂರ್ವದಲ್ಲಿ ವಾಸವಾಗಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X