ಕುಕ್ಕಾಜೆ: ಎಸ್ಸೆಸ್ಸೆಫ್ ವತಿಯಿಂದ ರಮಝಾನ್ ತರಬೇತಿ

ಬಂಟ್ವಾಳ, ಮೇ 24: ಎಸ್ಸೆಸ್ಸೆಫ್, ಎಸ್.ವೈ.ಎಸ್., ಎಸ್ಸೆಸ್ಸೆಫ್ ಕ್ಯಾಂಪಸ್ ಕುಕ್ಕಾಜೆ ಇದರ ವತಿಯಿಂದ ಕುಕ್ಕಾಜೆ ಜಂಕ್ಷನ್ ನಲ್ಲಿ ರಮಝಾನ್ ಸಿದ್ದತಾ ಅಧ್ಯಯನ ತರಬೇತಿ ನಡೆಯಿತು.
ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲೆಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ರಮಝಾನ್ ಸಿದ್ದತೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕಾಜೆ ಎಸ್.ವೈ.ಎಸ್. ಅಧ್ಯಕ್ಷ ಮೊಯಿದು ಕುಂಞಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಅಥಿತಿಗಳಾಗಿ ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಕ್ಕಾಜೆ ಎಸ್ಸೆಸ್ಸೆಫ್ ಅಧ್ಯಕ್ಷ ಹಂಝ ಝುಹ್ರಿ ಸ್ವಾಗತಿಸಿ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಲುಕ್ಮಾನುಲ್ ಹಕೀಂ ವಂದಿಸಿದರು.
Next Story





