ಬಂಟ್ವಾಳ: “ರಾಜೇಶ್ ನಾಯ್ಕ್ ರನ್ನು ಗೆಲ್ಲಿಸಿ” ಎಂದು ಬರೆದಿಟ್ಟು ಅಡಿಕೆ ವ್ಯಾಪಾರಿ ಆತ್ಮಹತ್ಯೆ
ಬಂಟ್ವಾಳ, ಮೇ 24: “ತಮ್ಮನ ಅಗಲಿಕೆಯಿಂದ ನೊಂದು ಆತ್ಮಹತ್ಯೆ ಮಾಡುತ್ತಿದ್ದೇನೆ. ನೀವೆಲ್ಲಾ ಸೇರಿ ರಾಜೇಶ್ ನಾಯ್ಕ್ ರನ್ನು ಗೆಲ್ಲಿಸಿ” ಎಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಚಿಕಾರ ಪೇಟೆ ಎಂಬಲ್ಲಿ ನಡೆದಿದೆ.
ಎಸ್ ವಿಎಸ್ ಕಾಲೇಜು ಬಳಿಯ ಕಂಚಿಲ್ದಗದ್ದೆ ನಿವಾಸಿ, ಅಡಿಕೆ ವ್ಯಾಪಾರಿ ಮನೋಹರ್ ಶೆಟ್ಟಿ (34) ಎಂಬವರು ಕಂಚಿಕಾರ ಪೇಟೆಯ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಡೆತ್ ನೋಟೊಂದು ಪತ್ತೆಯಾಗಿದ್ದು, “ನನ್ನ ಸಾವಿಗೆ ನಾನೇ ಕಾರಣ. ನನ್ನ ತಮ್ಮ ಅಪಘಾತದಲ್ಲಿ ಸಾವಿಗೀಡಾಗಿದ್ದರಿಂದ ಜೀವನದಲ್ಲಿ ನೊಂದಿದ್ದೇನೆ. ನೀವೆಲ್ಲಾ ಸೇರಿ ರಾಜೇಶ್ ನಾಯ್ಕ್ ರನ್ನು ಗೆಲ್ಲಿಸಿ” ಎಂದು ಬರೆದಿದ್ದಾರೆ.
Next Story