ಮೇಜರ್ ಗೊಗೊಯ್ ರನ್ನು ಸನ್ಮಾನಿಸಿದ ಸೇನೆಯ ಕ್ರಮವನ್ನು ವಿರೋಧಿಸಿ ಎನ್ ಸಿ ಮಹಿಳಾ ಘಟಕದಿಂದ ಪ್ರತಿಭಟನೆ

ಶ್ರೀನಗರ, ಮೇ 24: ಯುವಕನೋರ್ವನನ್ನು ಜೀಪ್ ಮುಂಭಾಗಕ್ಕೆ ಕಟ್ಟಿದ್ದ ಮೇಜರ್ ಲೀತುಲ್ ಗೊಗೊಯ್ ಅವರನ್ನು ಸನ್ಮಾನಿಸಿರುವ ಸೇನೆಯ ಕ್ರಮವನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ನ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
“ಈ ಕ್ರಮವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ, ಇದರಿಂದಾಗಿ ಯಾರನ್ನು ಬೇಕಾದರೂ “ಮಾನವ ಗುರಾಣಿ”ಯಾಗಿ ಬಳಸಲು ಅನುಮತಿ ನೀಡಿದಂತಾಗಿದೆ. ಧ್ವನಿಯೆತ್ತುವ ಎಲ್ಲರನ್ನು ಕೊಲ್ಲಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನುವಂತಾಗಿದೆ” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಮೀಮಾ ಫಿರ್ದೌಸ್ ಹೇಳಿದರು.
ಚುನಾವಣಾ ಸಂದರ್ಭ ಕಾಶ್ಮೀರಿ ಯುವಕನನ್ನು ಜೀಪ್ ನ ಮುಂಭಾಗಕ್ಕೆ ಕಟ್ಟಿದ್ದ ವಿಡಿಯೋ ಹಾಗೂ ಚಿತ್ರಗಳು ವೈರಲ್ ಆಗಿದ್ದಲ್ಲದೆ, ಆಕ್ರೋಶಗಳೂ ವ್ಯಕ್ತವಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವ ಮಧ್ಯೆಯೇ ಸೇನೆ ಗೊಗೊಯ್ ಅವರನ್ನು ಪುರಸ್ಕರಿಸಿತ್ತು.
Next Story





