ಕಾಸರಗೋಡು: ಮಲಯಾಳಂ ಕಡ್ಡಾಯ ವಿರೋಧಿಸಿದ ಧರಣಿ
ಕಾಸರಗೋಡು, ಮೇ 24: ಮಲಯಾಳಂ ಭಾಷಾ ಕಡ್ಡಾಯಗೊಳಿಸಿದ ಸರಕಾರದ ನೀತಿಯನ್ನು ವಿರೋಧಿಸಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ದಿಗ್ಬಂಧನ ಚಳವಳಿಗೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದು, ಹಲವು ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ವಿದ್ಯಾನಗರ ಸ.ಐ ಬಾಬು ಪೆರಿಂಙೋತ್ ನೀಡಿದ ದೂರಿನಂತೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಕೀಂ ಕುನ್ನಿಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್, ಜಿಲ್ಲಾ ಪಂ. ಅಧ್ಯಕ್ಷ ಎಜಿಸಿ ಬಶೀರ್, ಪ್ರಮೀಳ ಸಿ. ನಾಯ್ಕ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಎ.ಕೆ.ಎಂ ಅಶ್ರಫ್, ಕುಂಬಳೆ ಇಗರ್ಜಿ ಯ ಧರ್ಮಗುರು ಫಾ. ಮಾರ್ಸೆಲ್ ಸಲ್ದಾನ, ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಬೇಳ ಇಗರ್ಜಿನ ಧರ್ಮಗುರು ಫಾ. ವಿನ್ಸೆಂಟ್ ಡಿಸೋಜಾ, ರವೀಶ ತಂತ್ರಿ ಕುಂಟಾರು, ಮೌಲಾನಾ ಅಬ್ದುಲ್ ಅಸೀಸ್, ಹರ್ಷಾದ್ ವರ್ಕಾಡಿ, ಕರೋಟ್ ಮಸೀದಿಯ ಸೈಫುಲ್ಲ ತಂಙಳ್, ಭಾಸ್ಕರ, ಅವಿನಾಶ್ ಬದಿಯಡ್ಕ, ಮಧೂರು ಮಾಜಿ ಪಂಚಾಯತ್ ಅಧ್ಯಕ್ಷ ಮಾಧವ ಮಾಸ್ತರ್, ಝೆಡ್.ಎ. ಕಯ್ಯಾರ್, ಕೃಷ್ಣ ಭಟ್ ಸೂರಂಬೈಲ್, ಸುಧಾಮ ಗೋಸಾಡ, ಉಮೇಶ್ ಸಾಲಿಯಾನ್, ಬಾಲಕೃಷ್ಣ ವೊರ್ಕೂಡ್ಲು, ಬದಿಯಡ್ಕ ಪಂ. ಅಧ್ಯಕ್ಷ ಕೃಷ್ಣ ಭಟ್, ರಾಧಾಕೃಷ್ಣ ಉಳಿಯತ್ತಡ್ಕ ಸೇರಿದಂತೆ ಹಲವರ ವಿರುದ್ಧ ಕೇಸು ದಾಖಲಿಸ ಲಾಗಿದೆ.
ಸಾರ್ವಜನಿಕ ಸಂಚಾರಕ್ಕೆ ಅಡ್ಡಿ, ಕಾನೂನು ವಿರುದ್ಧವಾಗಿ ಗುಂಪು ಸೇರಿದ್ದು, ಪೊಲೀಸರ ಆದೇಶ ಪಾಲನೆ ಮಾಡದಿರುವುದು ಮೊದಲಾದ ಮೊಕದ್ದೆಮೆಗಳನ್ನು ದಾಖಲಿಸಿಕೊಂಡಿದ್ದಾರೆ.
ವಿದ್ಯಾನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಮೆಲ್ವಿನ್ ಜೋಸ್ ನೀಡಿದ ದೂರಿನಂತೆ ಕೇಶವ ಪ್ರಸಾದ್ ನಾಣಿತ್ತಿಲು, ಚಂದು ಮಾಸ್ತರ್ ಮುಳ್ಳೇ ರಿಯ, ಪ್ರಸಾದ್ ಪೆರ್ಲ, ಹರೀಶ್ ಮಂಜೇ ಶ್ವರ, ಹರೀಶ್ ಶೆಟ್ಟಿ, ರಮೇಶ್ ಭಟ್, ನಾರಾಯಣ ಬದಿಯಡ್ಕ, ನಿವೃತ್ತ ಎಇಒ ವೆಂಕಟರಮಣ, ನ್ಯಾ. ಸದಾನಂದ ರೈ, ಪ್ರಸಾದ್ ರೈ ಜೋಡುಕಲ್ಲು, ಮಜೀದ್ ಕಣ್ವತೀರ್ಥ, ಪ್ರೊ. ಶ್ರೀನಾಥ್, ಎಡನೀರು ಗೋಪಾಲಕೃಷ್ಣ ಮಾಸ್ತರ್, ಲಕ್ಷ್ಮಣ ಪ್ರಭು ಕುಂಬಳೆ, ಕುಂಬಳೆ ಪಂ. ಅಧ್ಯಕ್ಷ ಪುಂಡರೀಕಾಕ್ಷ, ವಿಜಯಲಕ್ಷ್ಮಿ, ಮುತ್ತಣ್ಣ ಗೌಡ, ಕಮಲಾಕ್ಷ ಬಳ್ಳೂರು, ಬಿ.ವಿ. ಕಕ್ಕಿಲಾಯ, ನ್ಯಾಯವಾದಿ ಸುಬ್ಬಯ್ಯ ರೈ, ಮುರಳೀಧರ ಬಳ್ಳುಕ್ಕುರಾಯ ಸೇರಿದಂತೆ ಹಲವು ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಪ್ರವೇಶಕ್ಕೆ ಅಡ್ಡಿ, ಪೊಲೀಸರ ಆದೇಶ ಪಾಲನೆ ಮಾಡದಿರುವುದು, ಕರ್ತವ್ಯಕ್ಕೆ ಅಡ್ಡಿ ಮೊದಲಾದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.







