ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬ?

ಹೊಸದಿಲ್ಲಿ,ಮೇ 24: ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿಕೆ ನೀತಿಯನ್ನು ಈ ವರ್ಷ ಮುಂದುವರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಕುರಿತು ಕಾನೂನು ಅಭಿಪ್ರಾಯವನ್ನು ಕೋರಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಬುಧವಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಿಬಿಎಸ್‌ಇ 12 ನೇ ತರಗತಿಯ ಫಲಿತಾಂಶ ಪ್ರಕಟಣೆ ವಿಳಂಬಗೊಳ್ಳುವ ಸಾಧ್ಯತೆಗಳಿವೆ. ಕೃಪಾಂಕಗಳನ್ನು ನೀಡುವ ಪದ್ಧತಿಯನ್ನು ಈ ವರ್ಷದಿಂದ ಕೈಬಿಡಲು ಸಿಬಿಎಸ್‌ಇ ನಿರ್ಧರಿಸಿತ್ತು.
12ನೇ ತರಗತಿಯ ಫಲಿತಾಂಶ ಪ್ರಕಟಣೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದೇ ಸಿಬಿಎಸ್‌ಇ ಈವರೆಗೆ ಹೇಳಿಕೊಂಡು ಬಂದಿದೆ.
ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವುಂಟಾಗದಂತೆ ಎಲ್ಲ ಪ್ರಯತ್ನಗಳನ್ನು ಮಾಡಲಾ ಗುತ್ತಿದೆ. ಆದರೆ ಹಲವಾರು ರಾಜ್ಯಗಳು ಈಗಾಗಲೇ ಕೃಪಾಂಕ ನೀಡಿಕೆಯನ್ನು ಕೈಬಿಟ್ಟು ಫಲಿತಾಂಶಗಳನ್ನು ಪ್ರಕಟಿಸಿವೆ. ಹೀಗಾಗಿ ಈ ವಿಷಯದಲ್ಲಿ ಈಗಲೂ ಗೊಂದಲವುಳಿದು ಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಬುಧವಾರ ಶಾಲಾ ಶಿಕ್ಷಣ ಕಾರ್ಯದರ್ಶಿ ಹಾಗೂ ಸಿಬಿಎಸ್‌ಇ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಕೃಪಾಂಕ ನೀಡಿಕೆ ವಿಷಯವನ್ನು ಚರ್ಚಿಸಲಾಗಿದೆ.







