ಮಸಾಜ್ ಸೆಂಟರ್‌ನಲ್ಲಿ ಯುವತಿಯರ ಅರೆನಗ್ನ ಪೋಟೊ ಚಿತ್ರೀಕರಣ!
ಬೆಂಗಳೂರು, ಮೇ 24: ಮಸಾಜ್ ಸೆಂಟರ್‌ನಲ್ಲಿ ಯುವತಿಯರ ಅರೆನಗ್ನ ಸ್ಥಿತಿಯಲ್ಲಿರುವ ಫೋಟೊಗಳನ್ನು ಚಿತ್ರೀಕರಿಸಿರುವ ಆರೋಪ ಕೇಳಿ ಬಂದಿದೆ.
ನಗರದ ಯಲಹಂಕದಲ್ಲಿರುವ ಆಯುರ್ವೇದಿಕ್ ಸೆಂಟರ್‌ನಲ್ಲಿ ಮಸಾಜ್ ಮಾಡಿಸಿಕೊಳ್ಳಲು ಹೋದ ಮಹಿಳೆಯೊಬ್ಬರು ಕಿಟಕಿಯ ಕರ್ಟನ್‌ಗಳು ತೆಳುವಾಗಿದ್ದನ್ನು ಗಮನಿಸಿ ಹೊರಗಿನವರಿಗೆ ಕಾಣುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ಆದರೆ, ಸಿಬ್ಬಂದಿ ಕರ್ಟನ್ ಸರಿಯಾಗಿದ್ದು, ಹೊರಗಿನವರಿಗೆ ಕಾಣುವುದಿಲ್ಲ ಎಂದು ಹೇಳಿದರಾದರೂ ಅನುಮಾನದಿಂದ ಮಹಿಳೆಯು ಪರಿಶೀಲಿಸಿದಾಗ ಕರ್ಟನ್ ಬಳಿ ಕ್ಯಾಮೆರಾ ಅಳವಡಿಸಿರುವುದು ಕಂಡು ಬಂದಿದೆ. ಕೂಡಲೇ ಸೆಂಟರ್‌ನಿಂದ ಹೊರ ಬಂದ ಮಹಿಳೆಯು ಪೊಲೀಸರಿಗೆ ದೂರು ನೀಡಿರುವುದಾಗಿದೆ ಗೊತ್ತಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಆರ್ಯುವೇದಿಕ್ ಮಸಾಜ್ ಸೆಂಟರ್‌ನಲ್ಲಿ ಕ್ಯಾಮೆರಾ ಪತ್ತೆಯಾಗಿದೆ. ಅದನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಮಹಿಳೆಯರ ಅರೆನಗ್ನ ಫೋಟೊಗಳು ಕಂಡು ಬಂದಿದ್ದು, ವಿಚಾರಣೆ ನಡೆಸುವಷ್ಟರಲ್ಲಿ ಸಿಬ್ಬಂದಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಯಲಹಂಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





