ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ
ಮಂಗಳೂರು, ಮೇ 24: ಇಂಡಿಯನ್ ಸೋಶಿಯಲ್ ಸರ್ವಿಸ್ ಮತ್ತು ನವ ಭಾರತ್ ಕ್ರಿಕೆಟರ್ಸ್ ಸುರತ್ಕಲ್ ಜಂಟಿ ಆಶ್ರಯದಲ್ಲಿ 22ನೆ ವಾರ್ಷಿಕೋತ್ಸವವು ಇತ್ತೀಚೆಗೆ ಸುರತ್ಕಲ್ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 114 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಧರ್ಮಶಾಸ್ತ್ರ ಚೆಂಡೆ ಬಳಗದವರಿಂದ ಚೆಂಡೆ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಲಿಯಂ ಮಸ್ಕರೇನಸ್ ಕಡಂಬೋಡಿ ಸುರತ್ಕಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಬೀರ್ ಸುರತ್ಕಲ್, ಲಕ್ಷ್ಮಣ ಮದ್ಯ, ಅಯಾಝ್ ಕೃಷ್ಣಾಪುರ, ಸುರತ್ಕಲ್ ಎಂಸಿಸಿಯ ಸದಸ್ಯ ಶೋಭರಾಜ್, ಗಣೇಶ್ ಆಚಾರ್ಯ, ಎಸ್.ಕೆ.ಮುಸ್ತಫಾ, ಸಲಾಂ ಕಾನ, ಅಬ್ದುಲ್ ಹಮೀದ್, ಜೆರಾಲ್ಡ್ ಫೆರ್ನಾಂಡಿಸ್, ಜೆರಾಲ್ಡ್ ಡಿಸೋಜಾ, ಜಾನ್ ಎಫ್.ಕೆನಡಿ, ಶೇಖ್ ಸುರತ್ಕಲ್, ಫಾರೂಕ್ ಇಡ್ಯಾ ಉಪಸ್ಥಿತರಿದ್ದರು.
Next Story





