ಮೈಸೂರಿನಲ್ಲಿ ‘ಮುದ್ರಾರಾಕ್ಷಸ’ ನಾಟಕ ಯಶಸ್ವಿ ಪ್ರದರ್ಶನ

ಉಡುಪಿ, ಮೇ 24: ಮೈಸೂರು ರಂಗಾಯಣದ ವತಿಯಿಂದ ಇತ್ತೀಚೆಗೆ ಮೈಸೂರಿನ ಭೂಮಿಗೀತ ರಂಗ ಮಂದಿರದಲ್ಲಿ ನಡೆದ ಸಿಜಿಕೆ ನೆನಪಿನ ಹವ್ಯಾಸಿ ನಾಟಕೋತ್ಸವದಲ್ಲಿ ಸುಮನಸಾ ಕೊಡವೂರು ತಂಡದ ವಿಶಾಖದತ್ತ ಕವಿಯ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡಕ್ಕೆ ಅನುವಾದಿಸಿದ ಯುವ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶಿಸಿದ ‘ಮುದ್ರಾರಾಕ್ಷಸ’ ನಾಟಕವು ಯಶಸ್ವಿ ಪ್ರರ್ಶನ ಕಂಡಿತು.
ನಾಟಕ ಪ್ರದರ್ಶನದ ಬಳಿಕ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಹಾಗೂ ನಿರ್ದೇಶಕ ವಿದ್ದು ಉಚ್ಚಿಲ್ ಅವರನ್ನು ಹಿರಿಯ ರಂಗಕರ್ಮಿ ಮುದ್ದು ಕೃಷ್ಣ, ರಂಗ ವಿರ್ಮಶಕ ಅಕ್ಕಿ ಹೆಬ್ಬಾಳು ನಾಗರಾಜ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಂಗಾಯಣದ ಹಿರಿಯ ಕಲಾವಿದ ಹುಲಗಪ್ಪ ಕಟ್ಟಿಮನಿ, ಶ್ರೀನಿವಾಸ (ಚೀನಿ), ಹವ್ಯಾಸಿ ನಾಟಕೋತ್ಸವದ ಸಂಚಾಲಕ ಡಿ.ಯೋಗಾನಂದ ಮೊದಲಾದವರು ಉಪಸ್ಥಿತರಿದ್ದರು.
Next Story