ಸಿಇಟಿ-ಕೆಇಎ ಪ್ರವೇಶ ಪ್ರಕ್ರಿಯೆಗಳ ಪೂರ್ವ ಸಮಾಲೋಚನೆ
ಉಡುಪಿ, ಮೇ 24: ಉಡುಪಿ ಶ್ರೀಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಮತ್ತು ಬಂಟಕಲ್ ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾ ಲಯದ ಜಂಟಿ ಆಶ್ರಯದಲ್ಲಿ ಮತ್ತು ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಸಹಯೋಗದೊಂದಿಗೆ ಸಿಇಟಿ-ಕೆಇಎ ಪ್ರವೇಶ ಪ್ರಕ್ರಿಯೆಗಳ ಪೂರ್ವ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನವನ್ನು ಮೇ 28ರಂದು ಬೆಳಗ್ಗೆ 10 ಗಂಟೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸೋದೆ ಮಠಾಧೀಶ ಶ್ರೀವಿಶ್ವವಲ್ಲ ಭತೀರ್ಥ ಸ್ವಾಮೀಜಿ ಭಾಗವಹಿಸಲಿರುವರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮಾಜಿ ನೋಡಲ್ ಅಧಿಕಾರಿ ಮತ್ತು ಶಿರಸಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಚಂದ್ರ ಭಟ್ ಸಿಇಟಿ ಸಮಾಲೋಚನಾ ಪ್ರಕ್ರಿಯೆ ಮತ್ತು ಹೊಸ ನಿಯಮಾವಳಿಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಪಿಯುಸಿ ನಂತರದ ಕಲಿಕೆಯ ಅವಕಾಶಗಳು ವಿಷಯದ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮಾಹಿತಿ ಒದಗಿಸಲಿರುವರು. 2017ರ ಸಿಇಟಿ-ಕೆಇಎ ಪ್ರವೇಶ ಸುತ್ತಿನ ಆಯ್ಕೆಗಳನ್ನು ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನುಕೂಲವಾಗಲು ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯವನ್ನು ಬಂಟಕಲ್ಲಿನ ಕಾಲೇಜಿನಲ್ಲಿ ಮತ್ತು ಉಡುಪಿ ರಥಬೀದಿಯ ಭೂವರಾಹ ಸಂಕೀರ್ಣದಲ್ಲಿರುವ ಸೋದೆ ವಾದಿರಾಜ ಶಿಕ್ಷಣ ಪ್ರತಿಷ್ಠಾನದ ಕಚೇರಿಯಲ್ಲಿ ಉಚಿತವಾಗಿ ಒದಗಿಸಲಾಗಿದೆ.
ಹೆಚ್ಚಿನ ಮಾಹಿತಿ ಗಾಗಿ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್(9449330555) ಅಥವಾ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್(9448327999) ಅವರನ್ನು ಸಂಪಕಿಸರ್ಬಹುದು ಎಂದು ಪ್ರಕಟಣೆ ತಿಳಿಸಿದೆ.