ಮ್ಯಾಂಚೆಸ್ಟರ್ ದಾಳಿ: 3 ಬಂಧನ

ಲಂಡನ್, ಮೇ 24: ಬ್ರಿಟನ್‌ನ ಮ್ಯಾಂಚೆಸ್ಟರ್ ಅರೀನಾದಲ್ಲಿ ಸೋಮವಾರ ರಾತ್ರಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿ ಬ್ರಿಟಿಶ್ ಭದ್ರತಾ ಪಡೆಗಳು ಮೂವರನ್ನು ಬಂಧಿಸಿವೆ.
ಮ್ಯಾಂಚೆಸ್ಟರ್ ಅರೀನಾದಲ್ಲಿ ನಡೆದ ಅಮೆರಿಕದ ಖ್ಯಾತ ಪಾಪ್ ಗಾಯಕಿ ಆ್ಯರಿಯಾನಾ ಗ್ರಾಂಡ್‌ರ ಸಂಗೀತ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟ 22 ಮಂದಿಯ ಪೈಕಿ ಈವರೆಗೆ 10 ಹೆಸರುಗಳನ್ನು ಪ್ರಕಟಿಸಲಾಗಿದೆ.
Next Story





