ರಾಷ್ಟ್ರಮಟ್ಟದ ಯೋಗ ಗೌರಿ-ಗಾರ್ಗಿ ಸಹೋದರಿಯರು ಆಯ್ಕೆ

ತೀರ್ಥಹಳ್ಳಿ, ಮೇ 24: ದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ತೀರ್ಥಹಳ್ಳಿಯ ಗೌರಿ ಕಾರಂತ್ ಮತ್ತು ಗಾರ್ಗಿ ಕಾರಂತ್ ಸಹೋದರಿಯರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 17 ವರ್ಷದೊಳಗಿನ ಯೋಗ ಒಲಂಪಿಯಡ್‌ನಲ್ಲಿ ಗೌರಿ ಬಿ.ಆರ್. ಕಾರಂತ್ ಪ್ರಥಮಸ್ಥಾನ ಪಡೆದಿ ದ್ದಾರೆ. ಹಾಗೆ ರಾಜ್ಯ ಮಟ್ಟದ 14 ವರ್ಷದೊಳಗಿನ ಮಕ್ಕಳ ಯೋಗ ಒಲಂಪಿಯಡ್‌ನಲ್ಲಿ ಗಾರ್ಗಿ ಬಿ.ಆರ್. ಕಾರಂತ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರಿಬ್ಬರು ಜೂನ್ 18ರಿಂದ 20ರವರೆಗೆ ದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಒಲಂಪಿಯಡ್ ಯೋಗಾಸನ ಸ್ಪರ್ಧೆಗೆ ರಾಜ್ಯದಿಂದಪ್ರತಿನಿಧಿಸಲಿದ್ದಾರೆ. ಇವರಿಬ್ಬರು ಪಟ್ಟಣದ ಉದ್ಯಮಿ, ಮಯೂರ ಹೊಟೇಲ್ ಮಾಲಕ ರಾಘವೇಂದ್ರ ಕಾರಂತ್‌ರ ಪುತ್ರಿಯಾಗಿದ್ದಾರೆ.
Next Story





