ಎಸ್ಸೆಸ್ಸೆಫ್ ಸುಳ್ಯ ಡಿವಿಶನ್: ಹೈಸ್ಕೂಲ್ ಹೈಕೋನ್ ಕ್ಯಾಂಪ್

ಬೆಳ್ಳಾರೆ, ಮೇ 24: ಎಸ್ಸೆಸ್ಸೆಫ್ ಸುಳ್ಯ ಡಿವಿಶನ್ ಸಮಿತಿಯು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹೈಕೋನ್ ಕ್ಯಾಂಪ್ ಬೆಳ್ಳಾರೆ ದಾರುಲ್ ಹುದಾ ತಂಬಿನಮಕ್ಕಿಯಲ್ಲಿ ಜರಗಿತು.
ಡಿವಿಶನ್ ಅಧ್ಯಕ್ಷ ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ಅಧ್ಯಕ್ಷತೆಯಲ್ಲಿ ಇಸ್ಮಾಯಿಲ್ ಖಲೀಂ ಪಿ.ಇ. ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿದರು. ಹಸನ್ ಸಖಾಫಿ ಬೆಳ್ಳಾರೆ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಅಬ್ದುಲ್ಲತೀಫ್ ಮಾಸ್ಟರ್ ಸರಳಿಕಟ್ಟೆ, ಸುಳ್ಯ ಡಿವಿಶನ್ ಅಧ್ಯಕ್ಷ ಅಬ್ದುಲ್ಲತೀಫ್ ಸಖಾಫಿ ಗೂನಡ್ಕ, ಸುಳ್ಯ ಸೆಕ್ಟರ್ ಅಧ್ಯಕ್ಷ ಜುನೈದ್ ಸಖಾಫಿ ಜೀರ್ಮುಕ್ಕಿ ಹಾಗೂ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಕೆರಿಯರ್ , ಗೈಡನ್ಸ್ ಕನ್ವೀನರ್ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ ತರಗತಿ ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗು ಕ್ವಿಝ್ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು .ಡಿವಿಶನ್ ವ್ಯಾಪ್ತಿಯ ಮೂರು ಸೆಕ್ಟರ್ ಗಳ ಐವತ್ತರಷ್ಟು ವಿದ್ಯಾರ್ಥಿಗಳು ಕ್ಯಾಂಪಿನಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಎಚ್ ಝುಹ್ ರಿ ಕೊಂಬಾಳಿ, ಜಿಲ್ಲಾ ನಾಯಕರಾದ ಅಹಮದ್ ಕಬೀರ್ ಜಟ್ಟಿಪ್ಪಳ್ಳ, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಕಾರ್ಯದರ್ಶಿ ಸಿದ್ದೀಖ್ ಕಟ್ಟೆಕ್ಕಾರ್, ಎಸ್.ಎಂ.ಎ ಬೈತಡ್ಕ ರೀಜನಲ್ ಕ್ಷೇಮನಿಧಿ ಅಧ್ಯಕ್ಷ ಅಯ್ಯೂಬ್ ತಂಬಿನಮಕ್ಕಿ, ಡಿವಿಶನ್ ನಿಕಟಪೂರ್ವಕ ಕೋಶಾಧಿಕಾರಿ ಸಂಶುದ್ದೀನ್ ಪಳ್ಳಿಮಜಲು, ಡಿವಿಶನ್ ಪ್ರ.ಕಾರ್ಯದರ್ಶಿ ಜಿ.ಕೆ.ಇಬ್ರಾಹಿಂ ಅಂಜದಿ ಮಂಡೆಕೋಲು, ಕೋಶಾಧಿಕಾರಿ ಅಬ್ದುರಝಾಖ್ ಅಲೆಕ್ಕಾಡಿ, ಕ್ಯಾಂಪಸ್ ಕಾರ್ಯದರ್ಶಿ ಫೈಝಲ್ ಝುಹ್ ರಿ ಕಲ್ಲುಗುಂಡಿ, ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಟಿ.ಎಂ ಅಬ್ದುರಹ್ಮಾನ್ ಸಖಾಫಿ ತಂಬಿನಮಕ್ಕಿ, ಹಸೈನಾರ್ ಗುತ್ತಿಗಾರು, ಸಿದ್ದೀಖ್ ಸಅದಿ ನೆಕ್ಕಿಲ, ಕಲಾಂ ಝುಹ್ ರಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಿವಿಶನ್ ಹೈಸ್ಕೂಲ್ ಕನ್ವೀನರ್ ಅಬ್ಬಾಸ್ ಎ.ಬಿ ಸ್ವಾಗತಿಸಿ, ಸಿದ್ದೀಖ್ ಪಿ.ಎ ಎಲಿಮಲೆ ಧನ್ಯವಾದ ಸಮರ್ಪಿಸಿದರು.







