ಅಬೂಬಕರ್ ಆರ್ಲಪದವುಗೆ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ

ಪುತ್ತೂರು, ಮೇ 24: ಎಸ್4 ಸೋಷಿಯಲ್ ವೆಲ್ಫೇರ್ ಅಸೋಸಿ ಯೇಷನ್ ಕರ್ನಾಟಕ ಮತ್ತು ದಿ ಬುದ್ದಿಷ್ಠ ಸೊಸೈಟಿ ಆಫ್ ಇಂಡಿಯಾ, ಮುಂಬೈ ಇದರ ಆಶ್ರಯದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ರವರ ಜಯಂತೋತ್ಸವ ಮಹಾಸಮ್ಮೇಳನದಲ್ಲಿ ನೀಡಲ್ಪಡುವ ಪ್ರತಿಷ್ಠಿತ 8ನೆ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿಗೆ ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ಆಯ್ಕೆಯಾಗಿದ್ದಾರೆ.
ಮೇ 28 ರಂದು ಕಲಬುರಗಿ ಜಿಲ್ಲೆಯ ಕಲಬುರಗಿ ಎಸ್.ಎಮ್.ಪಂಡಿತ ರಂಗ ಮಂದಿರದಲ್ಲಿ ನಡೆಯುವ ಮಹಾಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story