ಬಿಹಾರ:ಐವರು ಮಾವೋವಾದಿಗಳಿಗೆ ಮರಣದಂಡನೆ

ಮುಂಗೇರ್,ಮೇ 25: ಬಿಹಾರದಲ್ಲಿ 2014ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ, ಇಬ್ಬರು ಯೋಧರ ಹತ್ಯೆಗೈದಿದ್ದ ಐವರು ಮಾವೋವಾದಿಗಳಿಗೆ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗುರುವಾರ ಮರಣ ದಂಡನೆಯನ್ನು ಘೋಷಿಸಿದೆ.
ನ್ಯಾ.ಜ್ಯೋತಿಸ್ವರೂಪ್ ಅವರು ಅಪರಾಧಿಗಳಾದ ವಿಪಿನ್ ಮಂಡಲ್, ಅಧಿಕ್ಲಾಯಿ ಪಂಡಿತ್, ರಾತು ಕೋಡಾ, ವಾನೊ ಕೋಡಾ ಮತ್ತು ಮನು ಕೋಡಾ ಅವರಿಗೆ ತಲಾ 25,000 ರೂ.ದಂಡವನ್ನೂ ವಿಧಿಸಿದರು.
2014ರಂದು ಖರಗಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗ್ಟಾ-ಲಕ್ಷ್ಮಿಪುರ ರಸ್ತೆಯಲ್ಲಿ ಸಿಆರ್‌ಪಿಎಫ್ ಯೋಧರಿದ್ದ ವಾಹನದ ಮೇಲೆ ಸುಮಾರು 50 ಮಾವೋವಾದಿಗಳ ಗುಂಪು ಗುಂಡಿನ ದಾಳಿ ನಡೆಸಿತ್ತು. ಸೋಮ್ ಗಾವಡಾ ಮತ್ತು ರವೀಂದ್ರ ರಾಯ್ ಎಂಬ ಬಿಹಾರದಲ್ಲಿ ಯೋಧರು ಮೃತಪಟ್ಟು, ಇತರ 10 ಜನರು ಗಾಯಗೊಂಡಿದ್ದರು.
Next Story





