ಬೆಳ್ತಂಗಡಿ: ಅಡಿಕೆ ಕಳವು ಜಾಲ ಬಯಲಿಗೆ; ಮೂವರ ಬಂಧನ

ಬೆಳ್ತಂಗಡಿ, ಮೇ 25: ಅಡಿಕೆ ಕಳವು ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗಂಗಾಧರ ಕೆ.ವಿ., ರಘು ಕೆ.ಬಿ. ಹಾಗೂ ಕುಟ್ಟಾಪಿ ಯಾನೆ ಕೆ.ಎಸ್.ಶೈನ್ ಬಂಧಿತ ಆರೋಪಿಗಳಾಗಿದ್ದಾರೆ. ಇವೆಲ್ಲರೂ ಕೇರಳ ಮೂದವರೆಂದು ತಿಳಿದುಬಂದಿದೆ.
ಬೆಳ್ತಂಗಡಿ ನಡ ಗ್ರಾಮದ ಥೋಮಸ್ ಎಂಬವರ ಮನೆಯಿಂದ ಮೇ 15ರಂದು ಭಾರೂ ಪ್ರಮಾಣದ ಅಡಿಕೆ ಕಳವಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣವನ್ನು ಭೇದಿಸಿರುವ ಪೊಲೀಸರು ಬಂಧಿತರಿಂದ 1.5 ಲಕ್ಷ ರೂ. ವೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
Next Story





