ಅಡ್ಡೂರು: ನದಿಗೆ ಬಿದ್ದು ಆರು ವರ್ಷದ ಬಾಲಕಿ ಮೃತ್ಯು

ಮಂಗಳೂರು, ಮೇ 25: ನದಿ ತೀರದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿ ನೀರುಪಾಲಾಗಿರುವ ಘಟನೆ ಫಲ್ಗುಣಿ ಅಡ್ಡೂರು ಅಳಕೆ ಬಳಿ ಗುರುವಾರ ನಡೆದಿದೆ.
ಕಲ್ಲಪ್ಪ ಮತ್ತು ಶೋಭಾ ದಂಪತಿಯ ಪುತ್ರಿ ಪಡಿಯಮ್ಮ (6) ನೀರುಪಾಲಾಗಿರುವ ಮಗು. ಮೂಲತಃ ಬಾಲಗಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನವರಾಗಿರುವ ದಂಪತಿ ಕೆಲಸದ ನಿಮಿತ್ತ ಮಂಗಳೂರಿಗೆ ಬಂದು ಅಡ್ಡೂರು ಅಳಕೆ ಬಳಿಯಲ್ಲಿ ವಾಸವಾಗಿತ್ತು. ಪಡಿಯಮ್ಮ ಗುರುವಾರ ನದಿ ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೊಳಗಾಗಿ ನೀರು ಪಾಲಾಗಿದ್ದಾಳೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





