ಅನಿಲ ಯೋಜನೆಯಲ್ಲಿ ಭಾರತದ ಬದಲಿಗೆ ರಶ್ಯ: ಇರಾನ್ ಎಚ್ಚರಿಕೆ

ವಿಯನ್ನಾ, ಮೇ 25: ಭಾರೀ ವಿಳಂಬಗೊಂಡಿರುವ ಫರ್ಝಾದ್-ಬಿ ಅನಿಲ ನಿಕ್ಷೇಪ ಅಭಿವೃದ್ಧಿ ಯೋಜನೆಯಲ್ಲಿ ಭಾರತದ ಬದಲಿಗೆ ರಶ್ಯವನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇರಾನ್‌ನ ಪೆಟ್ರೋಲಿಯಂ ಸಚಿವ ಬಿಜನ್ ನಾಮ್‌ದಾರ್ ಝಂಗಾನೆಹ್ ಗುರುವಾರ ಹೇಳಿದ್ದಾರೆ.
ಭಾರತದೊಂದಿಗಿನ ಒಪ್ಪಂದ ವಿಫಲವಾದರೆ ಬೇರೆ ಯಾರು ಬರುತ್ತಾರೆ ಎಂದು ವಿಯೆನ್ನಾದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ರಶ್ಯ’’ ಎಂದರು ಎಂದು ರಶ್ಯದ ಸರಕಾರಿ ಸುದ್ದಿ ಸಂಸ್ಥೆ ‘ಟಾಸ್’ ವರದಿ ಮಾಡಿದೆ.
Next Story





