ತಂಬಾಕು ನಿಷೇಧ ಉಲ್ಲಂಘನೆ: ದಂಡ ವಸೂಲಿ

ಉಡುಪಿ, ಮೇ 25: ಉಡುಪಿ ಜಿಲ್ಲೆಯನ್ನು ಕೋಟ್ಪಾ 2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಟಕ ಉಡುಪಿ ನಗರ ವ್ಯಾಪ್ತಿಯಲ್ಲಿ ಕಲ್ಸಂಕ, ಗುಂಡಿಬೈಲು, ಅಂಬಾಗಿಲು ಮತ್ತು ಸಂತೆಕಟ್ಟೆ ಪ್ರದೇಶದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಸೆಕ್ಷನ್ 4, 6(ಎ) ಅಡಿಯಲ್ಲಿ 34 ಪ್ರಕರಣ ದಾಖಲಿಸಿ 6700 ದಂಡ ವಸೂಲಿ ಮಾಡಲಾಗಿದೆ.
ಅಲ್ಲದೇ ದಾಳಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತು ನಾಮಫಲಕಗಳನ್ನು ಅಂಗಡಿ ಮಾಲಕರಿಂದ ತೆರವುಗೊಳಿಸಲಾಯಿತು. ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ವಾಸುದೇವ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜ ಮಹಂತೇಶ್ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ, ನಗರ ಪೋಲೀಸ್ ಠಾಣೆಯ ಅವಿನಾಶ್ ಮತ್ತು ದುರ್ಗಪ್ಪಉಪಸ್ಥಿತರಿದ್ದರು.
Next Story





