ಕಥೋಲಿಕ್ ಸಭಾ ಸದಸ್ಯತ್ವ ಆಂದೋಲನ ಕಾರ್ಯಕ್ರಮ

ಬಂಟ್ವಾಳ, ಮೇ 25: ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ವಲಯ ಹಾಗೂ ಅಗ್ರಾರ್ ಚರ್ಚ್ ಪಾಲನಾ ಸಮಿತಿ ವತಿಯಿಂದ ಕಥೋಲಿಕ್ ಸಭಾ ಸದಸ್ಯತ್ವ ಆಂದೋಲನ ಕಾರ್ಯಕ್ರಮ ಅಗ್ರಾರ್ ಚರ್ಚ್ ವಠಾರದಲ್ಲಿ ಜರಗಿತು.
ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ, ಅಗ್ರಾರ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಕೊಂಕಣಿ ಕ್ರೈಸ್ತ ಸಮುದಾಯದ ಉದಯೋನ್ಮುಖ ನಟಿ ಎಸ್ತೆರ್ ನೊರೊನ್ಹಾ, ಸೊಫಿಯಾ ಕೊಂಕಣಿ ಚಿತ್ರದ ನಿರ್ಮಾಪಕಿ ಜಾನೆಟ್ ನೊರೊನ್ಹಾರನ್ನು ಕಥೋಲಿಕ್ ಸಭಾ ಕೇಂದ್ರೀಯ ಸಮಿತಿ ಆಧ್ಯಾತ್ಮಿಕ ನಿರ್ದೇಶಕ ವಂ. ಗುರು ಮ್ಯಾಥ್ಯು ವಾಸ್ ಸಮ್ಮಾನಿಸಿದರು.
ಅಗ್ರಾರ್ ಚರ್ಚ್ ಧರ್ಮಗುರು ವಂ| ಗ್ರೆಗರಿ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಕಥೋಲಿಕ್ ಸಭಾ ಬಂಟ್ವಾಳ ವಲಯದ ಅಧ್ಯಕ್ಷ ಸ್ಟೇನಿ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಸಭಾ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಗೊಡ್ವಿನ್ ಪಿಂಟೋ ದಿಕ್ಸೂಚಿ ಭಾಷಣ ಮಾಡಿ ಶುಭ ಹಾರೈಸಿದರು. ಕಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್ ಲೋಬೊ ಉಪಸ್ಥಿತರಿದ್ದರು. ಕಥೋಲಿಕ್ ಸಭಾ ಬಂಟ್ವಾಳ ವಲಯದ ಸ್ಥಾಪಕಾಧ್ಯಕ್ಷ ವಾಲ್ಟರ್ ನೊರೊನ್ಹಾ ಸ್ವಾಗತಿಸಿದರು. ಅಗ್ರಾರ್ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ವಿನ್ಸೆಂಟ್ ಕಾರ್ಲೊ ವಂದಿಸಿದರು. ಕಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಸದಸ್ಯ ಅಲೋನ್ಸ್ ಎಲ್. ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.







