ಬೈಕ್-ಕಾರು ಢಿಕಿ:್ಕ ಇಬ್ಬರ ಸಾವು
ಕುಶಾಲನಗರ, ಮೇ 25: ಇಲ್ಲಿಗೆ ಸಮೀಪದ ಬೈಲಕೊಪ್ಪದಲ್ಲಿ ಬೈಕ್ ಮತ್ತು ಕಾರು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್‌ಸವಾರರಿಬ್ಬರು ಮರಣ ಹೊಂದಿದ ಘಟನೆ ಗುರುವಾರ ನಡೆದಿದೆ. ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬೈಕ್ ಸವಾರರು ಅಪಘಾತದಿಂದ ತೀವ್ರ ರಕ್ತ ಸ್ರಾವಗೊಂಡು ಸ್ಥಳದಲ್ಲೇ ಮೃತ್ತ ಪಟ್ಟಿದ್ದಾರೆ.
ಮಡಿಕೇರಿಗೆ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ಹಿಂತಿರುತ್ತಿದ್ದ ಸಂದರ್ಭ ಜೀವನ್ 22 ರಾಕೇಶ್ 25 ಎಂಬವರೆ ಮೃತಪಟ್ಟ ಯುವಕರು. ಮೈಸೂರು ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದ ಕಾರಿಗೆ ಬೈಕ್ ಢಿಕ್ಕಿಯಾಗಿದೆ ಎನ್ನಲಾಗಿದೆ. ಬೈಲಕೊಪ್ಪ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





