ಬಿಹಾರದಲ್ಲಿ ಬಸ್‌ಗೆ ಬೆಂಕಿ : 8 ಜನರ ಸಜೀವ ದಹನ

ಪಾಟ್ನಾ,ಮೇ 25: ಬಿಹಾರದ ನಳಂದಾ ಜಿಲ್ಲೆಯಲ್ಲಿ ಗುರುವಾರ ಸಂಜೆ ಖಾಸಗಿ ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಒಂದು ಮಗು ಸೇರಿದಂತೆ ಎಂಟು ಜನರು ಸಜೀವ ದಹನಗೊಂಡಿದ್ದು, ಇತರ 11 ಜನರಿಗೆ ಸುಟ್ಟಗಾಯಗಳಾಗಿವೆ.
ಪ್ರಯಾಣಿಕನೋರ್ವ ಸಾಗಿಸುತ್ತಿದ್ದ,ಮಾವು ಇತ್ಯಾದಿಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸುವ ದಹನಶೀಲ ರಾಸಾಯನಿಕ ಕ್ಯಾಲ್ಸಿಯಂ ಕಾಬೈಡ್‌ನಿಂದಾಗಿ ಬೆಂಕಿ ಹತ್ತಿಕೊಂಡಿರ ಬಹುದೆಂದು ಶಂಕಿಸಲಾಗಿದೆ. ಬಸ್ಸಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್‌ನ ಅವಶೇಷ ಪತ್ತೆಯಾ ಗಿದೆ.
ಶೇಖಪುರಾದಿಂದ ಪಾಟ್ನಾಕ್ಕೆ ಬರುತ್ತಿದ್ದ ಬಸ್ ಸಂಜೆ ಆರು ಗಂಟೆಗೆ ಹನೌತ್ ಬಝಾರ್‌ನ ವಿಶ್ವಕರ್ಮ ದೇವಸ್ಥಾನದ ಸಮೀಪ ತಲುಪುತ್ತಿದ್ದಂತೆ ಈ ದುರಂತ ಸಂಭವಿಸಿದೆ. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಗಾಯಾಳುಗಳನ್ನು ಜಿಲ್ಲಾಕೇಂದ್ರ ಬಿಹಾರಶರೀಫ್‌ನ ಸದರ್ ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಗಾಯಾಳುಗಳಿಗೆ ಉಚಿತ ಚಿಕಿತ್ಸೆಯ ಜೊತೆಗೆ,ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲ.ರೂ.ಪರಿಹಾರವನ್ನು ಘೋಷಿಸಿದ್ದಾರೆ.
Next Story





