ನಾಪತ್ತೆಯಾಗಿದ್ದ ಸುಖೋಯ್ ಯುದ್ಧವಿಮಾನದ ಅವಶೇಷ ಪತ್ತೆ

ಅಸ್ಸಾಂ, ಮೇ 26: ಇತ್ತೀಚೆಗೆ ನಾಪತ್ತೆಯಾಗಿದ್ದ ಭಾರತದ ಯುದ್ಧ ವಿಮಾನ ಸುಖೋಯ್-30ರ ಅವಶೇಷಗಳು ಅಸ್ಸಾಂ-ಅರುಣಾಚಲ ಪ್ರದೇಶದ ಗಡಿ ಪ್ರದೇಶದ ದಟ್ಟ ಅರಣ್ಯದಲ್ಲಿ ಶುಕ್ರವಾರ ಪತ್ತೆಯಾಗಿದೆ.
ಸುಖೋಯ್ ಯುದ್ಧ ವಿಮಾನ ಮೇ 23 ರಂದು ಮಂಗಳವಾರ ಬೆಳಗ್ಗೆ 9:30ರ ಸುಮಾರಿಗೆ ದೈನಂದಿನ ತರಬೇತಿಯ ಭಾಗವಾಗಿ ಭಾರತ- ಚೀನಾ ಗಡಿ ಭಾಗದಿಂದ 172 ಕಿ.ಮೀ. ದೂರದಲ್ಲಿರುವ ಅಸ್ಸಾಂನ ಐಎಎಎಫ್ ತೇಜ್‌ಪುರ ವಾಯುನೆಲೆಯಿಂದ ಹಾರಾಟವನ್ನು ಆರಂಭಿಸಿತ್ತು. ಹಾರಾಟ ಆರಂಭಿಸಿ ಕೆಲವೇ ಗಂಟೆಗಳ ಬಳಿಕ ವಿಮಾನವು ರ್ಯಾಡರ್‌ನ ಸಂಪರ್ಕ ಕಳೆದುಕೊಂಡಿತ್ತು. ಸುಖೋಯ್ ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು.
"ವಿಮಾನ ಅವಶೇಷ ಪತ್ತೆಯಾಗಿರುವ ಜಾಗದಲ್ಲಿ ಪ್ರತಿಕೂಲ ಹವಾಮಾನದಿಂದ ಕಾರ್ಯಾಚರಣೆಗೆ ಅಡಚಣೆಯಾಗುತಿದ್ದು ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪರಿಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ' ಎಂದು ರಕ್ಷಣಾ ವಿಭಾಗದ ವಕ್ತಾರ ಲೆಫ್ಟಿನೆಂಟ್ ಸಂಬಿತ್ ಘೋಷ್ ಹೇಳಿದ್ದಾರೆ.
Next Story





