Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ...

ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಹಿಳೆ ದೂರು

​ಮಂಗಳೂರು ರೈಲು ನಿಲ್ದಾಣಗಳಲ್ಲಿ ಕ್ಯಾಬ್ ಪ್ರವೇಶಕ್ಕೆ ಅಡ್ಡಿ

ವಾರ್ತಾಭಾರತಿವಾರ್ತಾಭಾರತಿ26 May 2017 7:17 PM IST
share
ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಹಿಳೆ ದೂರು

ಮಂಗಳೂರು, ಮೇ 26: ಮಂಗಳೂರು ರೈಲು ನಿಲ್ದಾಣದಲ್ಲಿ ಕ್ಯಾಬ್‌ಗಳಿಗೆ ಒಳ ಬರಲು ಆಟೊ ರಿಕ್ಷಾದವರು ಬಿಡುತ್ತಿಲ್ಲ. ಕೆಲವು ರಿಕ್ಷಾ ಚಾಲಕರು ಪ್ರಯಾಣಿಕರು ಹೇಳಿದಲ್ಲಿಗೆ ಹೊಗಲು ನಿರಾಕರಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ಘಟನೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ನಡೆಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ತಿಲಕ್‌ ಚಂದ್ರ ಇಂತಹ ಘಟನೆ ಸಂಭವಿಸಿದಾಗ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೋನ್ ನಂಬರ್ 100/ 9480802312) ಕರೆ ಮಾಡಿ ತಿಳಿಸುವಂತೆ ಸಲಹೆ ಮಾಡಿದರು.
 

ಕಿನ್ನಿಗೋಳಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಮಹಿಳೆಯೊಬ್ಬರು ಆರೋಪಿಸಿದರು. ಈ ಬಗ್ಗೆ ಮಂಗಳೂರು ಉತ್ತರ ಉಪ ವಿಭಾಗದ (ಪಣಂಬೂರು) ಎಸಿಪಿ ಕಚೇರಿಗೆ ತೆರಳಿ ಮಾಹಿತಿ ನೀಡುವಂತೆ ಎಸಿಪಿ ತಿಲಕ್ ಚಂದ್ರ ಸೂಚಿಸಿದರು.

ಕಾವೂರು ಜಂಕ್ಷನ್ ಬಳಿ ಕೂಳೂರು ಕಡೆಗೆ ಹೋಗುವ ರಸ್ತೆಯಲ್ಲಿರುವ ಹೊಂಡ 3 ತಿಂಗಳಿಂದ ಹಾಗೆಯೇ ಇದೆ ಎಂಬ ದೂರಿಗೆ ಉತ್ತರಿಸಿದ ಎಸಿಪಿ ಈ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದರು.

ಮಸಾಜ್ ಸೆಂಟರ್‌ಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಅನಧಿಕೃತ ಮಸಾಜ್ ಸೆಂಟರ್‌ಗಳ ವಿರುದ್ಧ ಕ್ರಮ ಜರಗಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಉತ್ತರಿಸಿದರು.

ನಗರದ ಹಲವು ಕಡೆ ರಸ್ತೆಗಳಲ್ಲಿ ಹಂಪ್ ಹಾಕಲಾಗಿದೆ. ಹಾಗೆಯೇ ರೊಜಾರಿಯೊ ಜಂಕ್ಷನ್ ಮತ್ತು ಇನ್ನೂ ಹಲವು ಕಡೆ ಹಂಪ್‌ಗಳನ್ನು ಹಾಕಬೇಕು ಎಂಬ ಸಲಹೆ ಸಾರ್ವಜನಿಕರಿಂದ ಬಂತು.

ಎಲ್ಲೆಡೆ ಹಂಪ್ ನಿರ್ಮಾಣ ಮಾಡುವುದು ಸುಗಮ ಸಂಚಾರದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಹಂಪ್ ಎಲ್ಲೆಲ್ಲಿ ಬೇಕೆಂದು ಸಂಚಾರ ವಿಭಾಗದ ಪೊಲೀಸರು ಸಮೀಕ್ಷೆ ನಡೆಸಿ ತೀರ್ಮಾನಕ್ಕೆ ಬರುತ್ತಾರೆ ಎಂದು ಎಸಿಪಿ ತಿಲಕ್‌ಚಂದ್ರ ಪ್ರತಿಕ್ರಿಯಿಸಿದರು
 

ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಇರುವ ಮರವನ್ನು ಕಡಿದರೆ ರಸ್ತೆ ಅಗಲ ಮಾಡಿ ಸಂಚಾರಕ್ಕೆ ಅನುಕೂಲತೆ ಕಲ್ಪಿಸಬಹುದು ಎಂದು ಸಾರ್ವಜನಿಕರು ಸಲಹೆ ನೀಡಿದಾಗ ಇಲ್ಲಿ ಮರ ಕಡಿದು ರಸ್ತೆ ಅಗಲಗೊಳಿಸುವ ಬಗ್ಗೆ ಕೆಲವೊಂದು ತಕರಾರು ಇರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
 

ಲಾಲ್‌ಬಾಗ್ ಜಂಕ್ಷನ್ ಬಳಿ ಕೆಲವು ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಿರುವುದು, ಕೆಎಸ್ಸಾರ್ಟಸಿ ಬಸ್ ನಿಲ್ದಾಣದ ಬಳಿ ಇರುವ ಸಿಗ್ನಲ್ ಲೈಟ್ ಕಾರ್ಯಾಚರಿಸದಿರುವುದು, ಬಜ್ವೆಯ ಹಳೆ ಕಾನ್ವೆಂಟ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ, ಮೂಡುಬಿದಿರೆ ಮೀನಿನ ಮಾರ್ಕೆಟ್ ಬಳಿ ಸಂಚಾರ ಸಮಸ್ಯೆ, ಬೋಂದೆಲ್‌ನಲ್ಲಿ ರಸ್ತೆ ಸೂಚನಾ ಫಲಕ ಇಲ್ಲದಿರುವುದು, ಪಡೀಲ್‌ನ ಬಜಾಲ್ ಕ್ರಾಸ್ ಬಳಿ ಬಸ್ಸುಗಳ ನಿಲುಗಡೆಯಿಂದ ಆಗಿಂದಾಗ್ಗೆ ಟ್ರಾಫಿಕ್ ಜಾಮ್, ಕುಳಾಯಿ ಹೊನ್ನಕಟ್ಟೆಯಲ್ಲಿ ವಾಹನಗಳ ಅಡ್ಡಾ ದಿಡ್ಡಿ ನಿಲುಗಡೆ ಬಗ್ಗೆ ದೂರುಗಳು ಬಂದವು. ಕೂಳೂರು ಚರ್ಚ್ ಬಳಿ ಬಸ್ ಶೆಲ್ಟರ್ ಪುನರ್ ನಿರ್ಮಾಣ ಮಾಡಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬಂತು.
 
ಲಾಲ್‌ಬಾಗ್‌ನಲ್ಲಿ ಸಿಗ್ನಲ್ ವ್ಯವಸ್ಥೆ ಇರುವುದರಿಂದ ಪಕ್ಕದಲ್ಲಿರುವ ಕೆಎಸ್ಸಾರ್ಟಿಸಿ ಜಂಕ್ಷನ್‌ನಲ್ಲಿ ಇನ್ನೊಂದು ಸಿಗ್ನಲ್ ವ್ಯವಸ್ಥೆಯ ಆವಶ್ಯಕತೆ ಇರುವುದಿಲ್ಲ ಎಂದು ಮನಗಂಡು ಇಲ್ಲಿದ್ದ ಸಿಗ್ನಲ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಈ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ಎಸಿಪಿ ತಿಲಕ್‌ ಚಂದ್ರ ತಿಳಿಸಿದರು. ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪರಿಸರದಲ್ಲಿ ಮತ್ತು ಕಂಕನಾಡಿ ಹಾಗೂ ನಗರದ ಇತರ ಕೆಲವು ಕಡೆ ಬೆಳಗ್ಗೆ ಐದೂವರೆ ಗಂಟೆಗೆ ಬಾರ್‌ಗಳು ಮತ್ತು ವೈನ್ ಶಾಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ಬೆಳಗ್ಗೆ ಎದ್ದು ವೈನ್‌ಶಾಪ್‌ಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರಿದರು
ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ವೈನ್ ಶಾಪ್ ಮಾಲಕರಿಗೆ ನೋಟಿಸ್ ನೀಡಲಾಗುವುದು ಎಂದು ಎಸಿಪಿ ತಿಲಕ್ ಚಂದ್ರ ಅವರು ತಿಳಿಸಿದರು.
  
 ಸ್ಟೇಟ್ ಬ್ಯಾಂಕ್‌ನಿಂದ ಬಜ್ಪೆಗೆ ಮತ್ತು ಶಿಬರೂರು ಮಾರ್ಗವಾಗಿ ದೇಲಂತಬೆಟ್ಟುವಿಗೆ ಹೆಚ್ಚುವರಿ ಸಿಟಿ ಬಸ್ಸು ಸೌಲಭ್ಯ ಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಮನವಿ ನೀಡುವಂತೆ ಎಸಿಪಿ ತಿಳಿಸಿದರು. ಈಗಾಗಲೇ ರೂಟ್‌ನಲ್ಲಿ ಇರುವ ಬಸ್ಸುಗಳು ಬಾರದಿದ್ದರೆ ಸಂಬಂಧ ಪಟ್ಟ ಬಸ್ಸಿನ ನಂಬ್ರ ಸಮೇತ ಪೊಲೀಸರಿಗೆ ದೂರು ಸಲ್ಲಿಸಿದರೆ ಕ್ರಮ ಜರಗಿಸಲಾಗುವುದು ಎಂದರು.

ಪಣಂಬೂರು ವೃತ್ತದ ಬಳಿಯ ಬಸ್ ತಂಗುದಾಣದಲ್ಲಿ ಗಾರ್ಡನ್ ನಿರ್ಮಿಸಲಾಗಿದ್ದು, ಈಗ ಅಲ್ಲಿ ಬಸ್ಸುಗಳು ತಂಗುದಾಣ ಇಲ್ಲದ ಕಡೆ ನಿಲ್ಲುತ್ತಿವೆ. ತಂಗುದಾಣ ಇರುವಲ್ಲಿಯೇ ಬಸ್ಸು ನಿಲ್ಲುವಂತಾಗ ಬೇಕು ಎಂದೊಬ್ಬರು ಸಲಹೆ ಮಾಡಿದರು. ಈ ಕುರಿತು ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಸಿಪಿ ತಿಳಿಸಿದರು.
 

ಕರಂಗಲ್ಪಾಡಿಯಲ್ಲಿ ಹಾಕಿರುವ ರಸ್ತೆ ಡಿವೈಡರ್ ಸಂಚಾರ ಸಮಸ್ಯೆಗೆ ಕಾರಣವಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸಿಪಿ ಈ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದರು.
   

ಪಿವಿಎಸ್ ಜಂಕ್ಷನ್‌ನಲ್ಲಿ ಫ್ರೀ ಲ್‌ಟೆ ಸೌಲಭ್ಯ ಇದ್ದರೂ ಅಲ್ಲಿ ವಾಹನ ಮುಂದಕ್ಕೆ ಹೋಗಲು ಫ್ರೀ ಸಿಗುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸಿಪಿ ತಿಲಕ್‌ಚಂದ್ರ ಅವರು ಅಲ್ಲಿ ಕಾಂಕ್ರೀಟ್ ಹಾಕಿ ರಸ್ತೆ ಅಗಲಗೊಳಿಸುವ ಕಾಮಗಾರಿ ಬಾಕಿ ಇದೆ. ಇದರ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದರು.
   

ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಏಕಮುಖ ರಸ್ತೆ ಇದ್ದು, ಅಲ್ಲಿ ಸೂಚನಾ ಫಲಕ ಅಳವಡಿಸಲು ಕ್ರಮ ಜರಗಿಸಲಾಗುವುದು. ನಂತೂರು ವೃತ್ತದ ಬಳಿ ರಸ್ತೆ ಬದಿ ಮಲ್ಲಿಗೆ ಹೂವು ಮಾರಾಟ ಮಾಡುವವರನ್ನು ಮತ್ತಷ್ಟು ರಸ್ತೆ ಬದಿಗೆ ಹೋಗುವಂತೆ ಸೂಚಿಸಲಾಗುವುದು ಎಂದು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು
 
 ಸುರತ್ಕಲ್‌ನಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಅದು ಕೆಟ್ಟು ಹೋಗಿದ್ದು, ಸಂಚಾರ ಯೋಗ್ಯವಾಗಿಲ್ಲ. ಅದನ್ನು ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಈ ರಸ್ತೆ ದುರಸ್ತಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಸಿಪಿ ತಿಳಿಸಿದರು.
 

ಬಸ್ಸುಗಳ ಪೈಪೋಟಿ
 ಸುರತ್ಕಲ್ ಕಡೆಗೆ ಸಂಚರಿಸುವ ಸಿಟಿ ಬಸ್ಸುಗಳ ಸಂಖ್ಯೆ ಸಾಕಷ್ಟಿದ್ದರೂ ಕೆಲವೊಮ್ಮೆ ಪೈಪೋಟಿಯಿಂದ ಬಸ್ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋಗುತ್ತಿರುವ ಬಗ್ಗೆ ಮತ್ತು ಮುಳಿಹಿತ್ಲುವಿಗೆ ಎರಡು ಸಿಟಿ ಬಸ್‌ಗಳಿದ್ದು, ಅವುಗಳಲ್ಲಿ ನಾಮ ಫಲಕ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ ಸಾರ್ವಜನಿಕರು ದೂರಿದರು.

ಕರ್ಕಶ ಹಾರ್ನ್ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿ ಇದರಿಂದ ತನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ ಎಂದರು.
ಬಸ್ ಮತ್ತು ಇತರ ವಾಹನಗಳ ಕರ್ಕಶ ಹಾರ್ನ್ ಬಗ್ಗೆ ಈಗಾಗಲೆ ಕ್ರಮ ಜರಗಿಸಲಾಗುತ್ತಿದೆ. ಈ ಅಭಿಯಾನ ಮುಂದುವರಿಯಲಿದೆ. ಕರ್ಕಶ ಹಾರ್ನ್ ಮಾಡುವ ಉಪಕರಣವನ್ನು ಕೀಳಲಾಗುತ್ತಿದೆ ಎಂದು ಎಸಿಪಿ ವಿವರಿಸಿದರು.
 

ಮಂಗಳಾ ಕ್ರಿಡಾಂಗಣದಲ್ಲಿ ಬೆಳಗ್ಗೆ ಜಾಗಿಂಗ್ ನಡೆಸುವ ಮಹಿಳೆಯನ್ನು ಕೆಲವು ಪಡ್ಡೆ ಹುಡುಗರು ಚುಡಾಯಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತ ಮಹಿಳೆಯೊಬ್ಬರು ದೂರು ನೀಡಿದರು. ಇನ್ನು ಮುಂದೆ ಇಂತಹ ಘಟನೆ ನಡೆದರೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡುವಂತೆ ಎಸಿಪಿ ಸಲಹೆ ಮಾಡಿದರು.

ಸಿಸಿಆರ್‌ಬಿ ವಿಭಾಗದ ಎಸಿಪಿ ವೆಲೆಂಟೈನ್ ಡಿಸೋಜ, ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್, ಸಿಸಿಆರ್‌ಬಿ ಎಎಸ್ಸೈ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X