ಶನಿವಾರದಿಂದ ರಮಝಾನ್ ಪ್ರಾರಂಭ

ಮಂಗಳೂರು, ಮೇ 26: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಕೇರಳದ ಕಾಪಾಡ್ ನಲ್ಲಿ ರಮಝಾನ್ ತಿಂಗಳ ಚಂದ್ರದರ್ಶನವಾಗಿರುವುದರಿಂದ ಶನಿವಾರದಿಂದ ರಮಝಾನ್ ತಿಂಗಳ ಉಪವಾಸ ಪ್ರಾರಂಭವಾಗಲಿದೆ ಎಂದು ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ವಿ.ಕೆ.ಸದಖತುಲ್ಲಾ ಫೈಝಿಯವರು ದ.ಕ.ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರ ಪರವಾಗಿ ಘೋಷಿಸಿರುವುದಾಗಿ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಅವರು ಶನಿವಾರದಿಂದ ರಮಝಾನ್ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ.
Next Story





