ಕೇಂದ್ರದ ನಿರ್ಧಾರಕ್ಕೆ ಪೇಜಾವರಶ್ರೀ ಸ್ವಾಗತ
ಉಡುಪಿ, ಮೇ 26: ದೇಶಾದ್ಯಂತ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸುವ ಕೇಂದ್ರ ಸರಕಾರದ ಆದೇಶವನ್ನು ಉಡುಪಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.
‘ಕೇಂದ್ರ ಸರಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪೂರ್ವಾಪರ ತಿಳಿಯದೇ ನಿರಪರಾಧಿಗಳ ಹತ್ಯೆ, ಹಲ್ಲೆ ಯತ್ನ ನಡೆಯಬಾರದು.’ ಎಂದು ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
ಸರಕಾರ ಕಾನೂನನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಕೆಲವರು ಆವೇಶದಿಂದ ವರ್ತಿಸುತ್ತಾರೆ. ಇದು ಅನಾಹುತಕ್ಕೆ ಕಾರಣವಾಗುತ್ತದೆ. ಆದುದರಿಂದ ಕಾನೂನು ಅಂಗೀಕಾರ ಗೊಂಡರೆ ಸಾಲದು ಅದು ಸಮರ್ಪಕವಾಗಿ ಜಾರಿಯಾಗಬೇಕು. ಆದರೆ ಕಾನೂನಿನ ದುರುಪಯೋಗ ಸಲ್ಲದು ಎಂದವರು ನುಡಿದರು.
Next Story





