ಮೇ 27: ಮಸ್ಜಿದ್ ಇಬ್ರಾಹೀಂ ಖಲೀಲ್‍ನಲ್ಲಿ ರಮಝಾನ್ ಪ್ರವಚನ
ಮಂಗಳೂರು, ಮೇ 26: ನಗರದ ನೆಲ್ಲಿಕಾಯಿ ರಸ್ತೆಯ ಮಸ್ಜಿದ್ ಇಬ್ರಾಹೀಂ ಖಲೀಲ್‍ನಲ್ಲಿ ಶುಕ್ರವಾರ ಮತ್ತು ರವಿವಾರ ಹೊರತುಪಡಿಸಿ ಪ್ರತಿದಿನ ಝೊಹರ್ ನಮಾಝಿನ ಬಳಿಕ ಈ ಕೆಳಗಿನ ವಿದ್ವಾಂಸರ ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.
ಮೇ. 27 ರಂದು ಮೌಲಾನ ಅಬ್ದುಲ್ ಅಝೀಝ್ ಉಮ್ರಿ, ಮೇ 29 ರಂದು ಮೌಲವಿ ಅಬ್ದುಲ್ ರಶೀದ್ ಚಲವರ, ಮೇ 30 ರಂದು ಹದ್‍ಯತುಲ್ಲಾಹ್ ಸಲಫಿ, ಮೇ 31ರಂದು ಮಮ್ಮುಟ್ಟಿ ಮುಸ್ಲಿಯಾರ್, ಜೂನ್ 1 ರಂದು ಮೌಲಾನಾ ಮುಹಮ್ಮದ್ ಶಾಕಿಬ್ ಸಲೀಮ್ ಉಮ್ರಿ, ಜೂ. 3ರಂದು ಮೌಲವಿ ಅಲಿ ಶಾಕಿರ್ ಸುಲ್ಲಮಿ, 5 ರಂದು ಮೌಲವಿ ರಫೀಕ್ ಮದನಿ ಜಿದ್ದಾ, 6 ರಂದು ಮೌಲವಿ ಮುಜೀಬ್ ತಚ್ಚಂಬಾರ, 7 ರಂದು ಮೌಲವಿ ಫೈಝಲ್ ಚಕ್ಕರಕಲ್, 8 ರಂದು ಮೌಲಾನ ಅಬುರ್ರಹೀಮ್ ಸಗ್ರಿ, 10 ರಂದು ಮೌಲವಿ ನಾಸರ್ ಸುಲ್ಲಮಿ, 12 ರಂದು ಮೌಲವಿ ಅಲಿ ಉಮರ್, 13 ರಂದು ಮೌಲವಿ ಮುಸ್ತಫ ದಾರಿಮಿ, 14 ರಂದು ಮೌಲವಿ ಅಬು ನಜೀಮ್ ಸ್ವಲಾಹಿ, 15 ರಂದು ಮೌಲವಿ ಮುನೀರ್ ಮದನಿ, 17 ರಂದು ಮೌಲವಿ ನಾಸಿರುದ್ದೀನ್ ರಹ್ಮಾನಿ, 19 ಮತ್ತು 20 ರಂದು ಚುಯೈಲಿ ಅಬ್ದುಲ್ಲಾ ಮುಸ್ಲಿಯಾರ್, 21 ರಂದು ಮೌಲವಿ ಬಾದುಶಾ ಬಾಖವಿ, 22 ರಂದು ಮೌಲವಿ ಸುಹೈಲ್ ಕಡಮೇರಿ ಮತ್ತು 24 ರಂದು ಶಾಜಹಾನ್ ಫೈಝಿ ಮುಂತಾದವರು ಪ್ರವಚನ ನೀಡಲಿದ್ದಾರೆಂದು ಎಸ್.ಕೆ.ಎಸ್.ಎಂ ಕೇಂದ್ರ ಸಮಿತಿ ಮತ್ತು ಇಬ್ರಾಹೀಂ ಖಲೀಲ್ ಮಸೀದಿಯ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





