ರಮಝಾನ್ ತಿಂಗಳಲ್ಲಿ ಸೂಕ್ತ ಭದ್ರತೆಗೆ ಎಸ್.ಡಿ.ಪಿ.ಐ. ಮುಡಿಪು ಸಮಿತಿ ಮನವಿ

ಕೊಣಾಜೆ, ಮೇ 27: ರಮಝಾನ್ ತಿಂಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಮುಡಿಪು ವಲಯ ಸಮಿತಿಯು ಕೊಣಾಜೆ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ರಾತ್ರಿ ಹಾಗೂ ಬೆಳಗ್ಗಿನ ಜಾವದಲ್ಲಿ ಮಸೀದಿಗಳಲ್ಲಿ ನಡೆಯುವ ಪ್ರಾರ್ಥನೆಗೆ ತೆರಳುವ ಸಮಯದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನವಿ ಮಾಡಲಾಗಿದೆ.
ಕೆಲವು ತಿಂಗಳುಗಳಿಂದ ಕೊಣಾಜೆ ಹಾಗೂ ಪರಿಸರ ಪ್ರದೇಶಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ಜನಸಾಮಾನ್ಯರು ಭಯಭೀತಿಯಲ್ಲಿದ್ದಾರೆ. ಆದುದರಿಂದ ಸೂಕ್ತವಾದ ಬಂದೋಬಸ್ತ್ ಒದಗಿಸಿ ಶಾಂತಿ ಹಾಗೂ ಸೌಹಾರ್ದಯುತ ವಾತಾವರಣ ನಿರ್ಮಿಸಬೇಕೆಂದು ವಿನಂತಿಸಿದ್ದಾರೆ.
ಈ ಸಂದರ್ಭ ಎಸ್.ಡಿ.ಪಿ.ಐ. ಮುಡಿಪು ವಲಯಾಧ್ಯಕ್ಷರಾದ ಆಸೀಫ್ ಫಜೀರ್, ವಲಯ ಸಮಿತಿಯ ಕಾರ್ಯದರ್ಶಿ ಸಿರಾಜ್ ಅರ್ಕಾಣ, ಎಸ್.ಡಿ.ಪಿ.ಐ. ಮಂಗಳೂರು ವಿಧಾನಸಭಾ ಸಮಿತಿಯ ಸದಸ್ಯರಾದ ಸಂಶುದ್ದೀನ್ ಮೂಳೂರು, ಖಾದರ್ ಮುಡಿಪು ಉಪಸ್ಥಿತರಿದ್ದರು.
Next Story





