ಮೋದಿ ಸರಕಾರದ ಸಾಧನೆಗಳನ್ನು ಸಚಿವ ರೈಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಬಿಜೆಪಿ

ಮಂಗಳೂರು, ಮೇ 27: ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ರಮನಾಥ ರೈರವರಿಗೆ ಕೇಂದ್ರದ ಸಾಧನೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿ.ಎಸ್.ಟಿ ಕಾಯ್ದೆ ಯು.ಪಿ.ಎ ಸರಕಾರದ ಯೋಜನೆ ಎಂದು ಹೇಳುವ ಸಚಿವರು ಅದನ್ನು ಅನುಷ್ಠಾನಕ್ಕೆ ಯುಪಿಎ ಯಾಕೆ ತರಲಿಲ್ಲ ಎಂಬುದನ್ನು ಉತ್ತರಿಸಲಿ ಎಂದು ದ.ಕ. ಜಿಲ್ಲಾ ಬಿಜೆಪಿ ಸವಾಲೆಸೆದಿದೆ.
ಪ್ರಧಾನಿ ಮೋದಿ ಸರಕಾರದ ಮೂರು ವರ್ಷಗಳ ಸಾಧನೆ ಕಳಪೆ ಎಂಬ ಸಚಿವ ರೈವಯರ ಹೇಳಿಕೆಗೆ ಪತ್ರಿಕಾ ಪ್ರಕಟನೆ ಮೂಲಕ ಪ್ರತಿಕ್ರಿಯಿಸಿಸಿರುವ ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು, ವಾಜಪೇಯಿಯವರು ಪ್ರಧಾನಿಗಳಾಗಿದ್ದ ಸಂಧರ್ದಲ್ಲಿ ಜಿ.ಎಸ್.ಟಿಯ ಬಗ್ಗೆ ನಿಮಾವಳಿಗಳನ್ನು ರೂಪಿಸಲು ಪ್ರತ್ಯೇಕ ತಂಡವನ್ನು ರಚಿಸಿ ಆದರ ಬಗ್ಗೆ ಶಿಪಾರಸ್ಸು ಮಾಡಲಾಗಿತ್ತು. ಅದನ್ನು ಲೆಕ್ಕಿಸದೆ ಯು.ಪಿ.ಎ ಪ್ರತ್ಯೇಕ ತಂಡ ರಚಿಸಿದ್ದಾದರು ಯಾಕೆ ಎಂಬುದನ್ನು ಉತ್ತರಿಸಲಿ ಎಂದು ಸವಾಲೆಸೆದಿದ್ದಾರೆ.
ಇಷ್ಟಕ್ಕು ಯು.ಪಿ.ಎ ಕಾಲವಧಿಯಲ್ಲಿ ಮಂಡಿಸಲಾಗಿದ್ದ ಕಾಯ್ದೆಯಲ್ಲಿ ರಾಜ್ಯಗಳ ಅಧಿಕಾರವನ್ನು ಹತ್ತಿಕ್ಕಲಾಗಿತ್ತು. ಆದ್ದರಿಂದ ಅದು ಅನುಷ್ಠಾನಗೊಳ್ಳದೆ ಮೊಟಕುಗೊಂಡಿತ್ತು. ಇಂದು ಮೋದಿ ಸರಕಾರ ಜಾರಿಗೊಳಿಸುತ್ತಿರುವ ಜಿ.ಎಸ್.ಟಿ ಕಾಯ್ದೆಯಡಿಯಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಇದು ಕಾಂಗ್ರೆಸ್ ಸರಕಾರದಿಂದ ಯಾಕೆ ಸಾಧ್ಯವಾಗಿರಲಿಲ್ಲ ಎಂಬುದನ್ನು ಮಾನ್ಯ ಸಚಿವರು ಉತ್ತರಿಸಲಿ. ಅಪನಗದೀಕರಣದ ಬಗ್ಗೆ ಅಪಸ್ವರ ತೆಗೆದಿರುವ ಸಚಿವರಿಗೆ ಇದ್ದರಿಂದ ದೇಶಕ್ಕೆ ಸುಮಾರು 5 ಲಕ್ಷ ಕೋಟಿಗಳಷ್ಟು ಹಣ ಉಳಿತಾಯವಾಗಿದೆ ಎಂಬುದು ತಿಳಿದಿಲ್ಲದಂತೆ ತೊೀರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಾಜಪೇಯಿಯವರ ಕಾಲದಲ್ಲಿ ಸುಮಾರು 5 ಕೋಟಿ ನೂತನ ಉದ್ಯೋಗಗಳು ಕೇವಲ 5 ವರ್ಷಗಳಲ್ಲಿ ಸೃಷ್ಟಿಯಾಗಿದ್ದವು. ಆದರೆ ಯು.ಪಿ.ಎ ಸರಕಾರದ ಅವಧಿಯಲ್ಲಿ ಈ ಪ್ರಮಾಣ ಶೇ.80ರಷ್ಟು ಕುಸಿತ ಕಂಡದ್ದು ಯಾಕೆ ಎಂಬುದನ್ನು ಸಚಿವರು ಉತ್ತರಿಸಲಿ. ಕೇಂದ್ರದ ಉದ್ಯೋಗಕ್ಕೆ ಒತ್ತು ಕೊಡವಂತಹ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ ಅಪ್ ಇಂಡಿಯಾ,ಸ್ಟಾಂಡ್ ಅಪ್ ಇಂಡಿಯಾ, ಮುದ್ರಾ ಮುಂತಾದವುಗಳ ಮೂಲಕ ಸುಮಾರು 8 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂಬುದನ್ನು ಸಚಿವರಿಗೆ ತಿಳಿಹೇಳಬೇಕಿದೆ.
ಅಂಕಿ ಅಂಶಗಳೇ ಸಾಬೀತು ಪಡಿಸುವ ಹಾಗೆ ದೇಶದೆಲ್ಲೆಡೆ ಕೋಮುಗಲಬೆಗಳು ಕಡಿಮೆಯಾಗಿರುವುದು ಕಳೆದ ಮೂರು ವರ್ಷಗಳಿಂದ ಎಂಬ ಸತ್ಯವನ್ನು ರೈರವರು ತಿಳಿದುಕೊಳ್ಳಲಿ. ಅಂತೆಯೇ ರಷ್ಯ, ಅಮೇರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳ ಭಾರತದೊಂದಿಗಿನ ಸಂಬಂಧ ಯು.ಪಿ.ಎ ಸರಕಾರದ ನಿರ್ಲಕ್ಷ್ಯದಿಂದ ಕಳಿಸಿ ಹೋಗಿತ್ತು., ಆದರೆ ಅವಲ್ಲೆವು ಸುಧಾರಿಸಿರುವುದು ಕಾಂಗ್ರೆಸ್ಸಿಗರಿಗೆ ನೋಡುಲಾಗುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಕೇಂದ್ರದಿಂದ ಉತ್ತಮ ಬಳುವಳಿ ದೊರಕಿದೆ. ದ.ಕ ಜಿಲ್ಲೆಗೆ ವಿವಿಧ ಯೋಜನೆಗಳಡಿಯಲ್ಲಿ ಸುಮಾರು 10 ಸಾವಿರ ಕೋಟಿಗಳಷ್ಟು ಹಣ ಹರಿದು ಬಂದಿರುವುದು ಇತಿಹಾಸ ನಿರ್ಮಿಸಿದೆ. 10 ವರ್ಷಗಳಲ್ಲಿ ಯು.ಪಿ.ಎ ಸರ್ಕಾರ ಬರಕ್ಕಾಗಿ ಕರ್ನಾಟಕಕ್ಕೆ ಕೊಟ್ಟ ಹಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೋದಿಯವರು ಕೇವಲ ಮೂರು ವರ್ಷಗಳಲ್ಲಿ ಕೊಟ್ಟಿರುವುದು ಸರಕಾರದ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಕಾಸ್ ಪುತ್ತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







