ವಿವಾಹಿತ ಮಹಿಳೆ ನಾಪತ್ತೆ

ಬಂಟ್ವಾಳ, ಮೇ 27: ಪತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ತಾಯಿ ಮನೆಯಿಂದ ಹೋದ ಮಹಿಳೆಯೋರ್ವರು ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬರಿಮಾರು ಗ್ರಾಮದ ಬಲ್ಯ ನಿವಾಸಿ ಗ್ಯಾಬ್ರಿಯಲ್ ಎಂಬವರ ಪುತ್ರಿ ಪೌಲಿನ್ ಲಸ್ರಾದೋ (28) ನಾಪತ್ತೆಯಾಗಿರುವ ಮಹಿಳೆ. ವರ್ಷದ ಹಿಂದೆ ರೋನಾಲ್ಡ್ ಡಿ ಸೋಜ ಎಂಬವರೊಂದಿಗೆ ವಿವಾಹವಾಗಿತ್ತು.
ಗಂಡ ಉದ್ಯೋಗ ನಿಮಿತ್ತ ವಿದೇಶದಲ್ಲಿರುವುದರಿಂದ ಪೌಲಿನ್ ತಾಯಿ ಮನೆಯಲ್ಲಿದ್ದರು. ಮಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಆಕೆ ಇತ್ತೀಚೆಗೆ ಕೆಲಸಕ್ಕೂ ಹೋಗದೆ ಮನೆಯಲ್ಲೆ ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಗಂಡನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದಾಕೆ ವಾಪಾಸು ಬಂದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸ ಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Next Story





