ಮೊಗವೀರ ಯುವ ಸಂಘಟನೆಯ ಕಚೇರಿ ಉದ್ಘಾಟನೆ

ಉಡುಪಿ, ಮೇ 27: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ನೂತನ ಕಟ್ಟಡ ‘ಮಾಧವ ಮಂಗಲ ಸಮುದಾಯ ಭವನ’ ಮತ್ತು ಜಿಲ್ಲಾ ಸಂಘಟನೆಯ ಕಚೇರಿ ‘ಶಾಲಿನಿ ಜಿ.ಶಂಕರ್ ಸಭಾಸದನ’ದ ಉದ್ಘಾಟನೆ ಶನಿವಾರ ಅಂಬಲಪಾಡಿ ಕಾಳಿಕಾಂಬಾ ನಗರದಲ್ಲಿ ಜರಗಿತು.
ನೂತನ ಕಟ್ಟಡ ಹಾಗೂ ಕಚೇರಿಯನ್ನು ಉದ್ಘಾಟಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಮಾತನಾಡಿ, ನಮ್ಮ ಸಂಘಟನೆಯದ್ದು ರಾಜಕೀಯ ರಹಿತ ನಿಲುವು. ಸಂಘಟನೆಯ ಮೂಲಕ ಹೊಸ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ್ದೇವೆ. ಅದನ್ನು ಸಮಾಜ ಗುರುತಿಸಿದೆ. ನಿಬಂಧನೆ, ಕಟ್ಟು ಪಾಡುಗಳನ್ನು ಯಾವುದೇ ಕಾರಣಕ್ಕೂ ಮುರಿಯಬಾರದು. ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸುವುದು ನಮ್ಮ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್, ಸ್ಥಾಪಕ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕೆ.ಟಿ.ಕಾಂಚನ್, ಯೋಗೇಶ್ ಚಂದ್ರದಾರ್, ಸಂಜೀವ, ಸದಾನಂದ ಬಳ್ಕೂರು ಉಪಸ್ಥಿತರಿದ್ದರು.
ಸತೀಶ್ ಕೋಟೇಶ್ವರ ಸ್ವಾಗತಿಸಿದರು. ಶಿವರಾಂ ಕೆ.ಎಂ. ಕಾರ್ಯಕ್ರಮ ನಿರೂ ಪಿಸಿ, ವಂದಿಸಿದರು.