ಎಂಯುಪಿಯ 100ನೆ ಕೃತಿ ಬಿಡುಗಡೆ

ಮಣಿಪಾಲ, ಮೇ 27: ಪಾರಂಪರಿಕವಾಗಿ ಹರಿದುಬಂದಿರುವ ಪ್ರಾಚೀನ ಆಯುರ್ವೇದ ವೈದ್ಯ ಪದ್ಧತಿ ಈಗಲೂ ಜೀವಂತವಾಗಿದ್ದು, ಜಾನಸಾಮಾನ್ಯರು ಇದರ ಕೊಡುಗೆಗಳನ್ನು ಅರಿತುಕೊಳ್ಳಬೇಕಾಗಿದೆ ಎಂದು ಮಣಿಪಾಲ ವಿವಿಯ ನಿವೃತ್ತ ಕುಲಪತಿ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಡಾ.ಎಂ. ಎಸ್. ವಲಿಯತ್ತಾನ್ ಹೇಳಿದ್ದಾರೆ.
ಮಣಿಪಾಲ ಸೆಂಟರ್ ಫಾರ್ ಫಿಲಾಸಫಿ ಎಂಡ್ ಹ್ಯುಮಾನಿಟೀಸ್‌ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಮಣಿಪಾಲ ಯುನಿವರ್ಸಿಟಿ ಪ್ರೆಸ್‌ನ 100ನೇ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಆಯುರ್ವೇದ ಕೇವಲ ಸಂಪ್ರದಾಯವಾಗಿರದೇ, ಪ್ರಾಯೋಗಿಕತೆಯನ್ನೂ ಒಳಗೊಂಡಿದೆ. ಆದರೆ ಬ್ರಿಟಿಷರು ಕೇವಲ ಔಷಧೀಯ ಚಿಕಿತ್ಸೆಗಷ್ಟೇ ಮಹತ್ವ ನೀಡಿದ್ದರಿಂದ ಅದು ಹಿಂದೆ ಸರಿಯುವಂತಾಯಿತು. ಕೆಲವೇ ವರ್ಷಗಳ ಇತಿಹಾಸವಿರುವ ಪಾಶ್ಚಿಮಾತ್ಯ ವೈದ್ಯಪದ್ಧತಿ ಜನಪ್ರಿಯಗೊಂಡು ಆಯುರ್ವೇದ, ಯುನಾನಿಯಂಥ ಪ್ರಾಚೀನ ಚಿಕಿತ್ಸಾ ಪದ್ಧತಿ ಹಿನ್ನೆಲೆಗೆ ಸರಿದವು ಎಂದರು.
ಆದರೆ ಈಗ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪರಿಣಾಮಕಾರಿ ಎಂದು ಭಾವಿಸಲಾದ ಪಾಸ್ಚಿಮಾತ್ಯ ಔಷಧಿಗಳ ಅಡ್ಡಪರಿಣಾಮದಿಂದ ಹೊಸ ಹೊಸ ಮಾರಕ ಕಾಯಿಲೆಗಳು ಹರಡುತಿವೆ. ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಆಯುರ್ವೇದದಲ್ಲಿ ಪರಿಹಾರವಿದೆ ಎಂದು ಡಾ.ವಲಿಯಾತ್ತನ್ ತಿಳಿಸಿದರು.
ಡಾ.ವಲಿಯಾತ್ತನ್ ಬರೆದ ‘ಆಯುರ್ವೇದಿಕ್ ಇನ್‌ಹೆರಿಟೆನ್ಸ್: ಎ ರೀಡರ್ಸ್ ಕಂಪಾನಿಯನ್’ ಪುಸ್ತಕವನ್ನು ಮಣಿಪಾಲ ವಿವಿಯ ಕುಲಪತಿ ಡಾ.ಎಚ್. ವಿನೋದ್ ಭಟ್ ಬಿಡುಗಡೆಗೊಳಿಸಿದರು. ಈ ಕೃತಿಯಲ್ಲಿ ಅಥರ್ವ ವೇದದಿಂದ ಹಿಡಿದು ಈಗಿನವರೆಗಿನ ಇತಿಹಾಸವನ್ನು ಬರೆದಿರುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಶೀತಲ್ ಭಟ್, ನಾಗಾಲ್ಯಾಂಡ್‌ನ ತೊನಾಲಿ ಸಿಮಾ ಬರೆದ ಹಾಗೂ ಕೋಲ್ಕತ್ತಾದ ಅನುಶ್ವಾ ಚಕ್ರವರ್ತಿ ಬರೆದ ಕೃತಿಗಳನ್ನು ಡಾ.ಎಂ.ಎಸ್.ವಲಿಯಾತ್ತನ್ ಬಿಡುಗಡೆಗೊಳಿಸಿದರು.
ಇದೇ ಸಂದರ್ದಲ್ಲಿ ಶೀತಲ್ ಭಟ್, ನಾಗಾಲ್ಯಾಂಡ್‌ನ ತೊನಾಲಿ ಸಿಮಾ ಬರೆದ ಹಾಗೂ ಕೋಲ್ಕತ್ತಾದ ಅನುಶ್ವಾ ಚಕ್ರವರ್ತಿ ಬರೆದ ಕೃತಿಗಳನ್ನು ಡಾ.ಎಂ.ಎಸ್.ವಲಿಯಾತ್ತನ್ ಬಿಡುಗಡೆಗೊಳಿಸಿದರು. ಎಂಯುಪಿಯ ಮುಖ್ಯ ಸಂಪಾದಕಿ ಹಾಗೂ ಯುರೋಪಿಯನ್ ಸ್ಟಡೀಸ್ ವಿಭಾಗದ ಮುಖ್ಯಸ್ಥೆ ಡಾ.ನೀತಾ ಇನಾಂದಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಎಂಸಿಪಿಎಚ್‌ನ ಪ್ರಾಧ್ಯಾಪಕಿ ಗಾಯತ್ರಿ ಪ್ರಭು ಹಾಗೂ ಪ್ರಭಾಕರ ಶಾಸ್ತ್ರಿ ಉಪಸ್ಥಿತರಿದ್ದರು.







