ರಸ್ತೆ ಅಪಘಾತ: ಯುವತಿ ಮೃತ್ಯು
ಪಡುಬಿದ್ರೆ, ಮೇ 27: ಬೈಕ್ ಸ್ಕಿಡ್ ಆಗಿ ಸವಸವಾರರಾಗಿದ್ದ ಯುವತಿಯೋರ್ವಳು ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಪಡುಬಿದ್ರೆ ಠಾಣಾ ವ್ಯಾಪ್ತಿಯ ನಡ್ಸಾಲು ಬೀಡು ಎಂಬಲ್ಲಿ ನಡೆದಿದೆ.
ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಆಯಿಶಾ ಶಿಬಾ (17) ಮೃತರು ಎಂದು ಗುರುತಿಸಲಾಗಿದೆ. ನಿಟ್ಟೆ ಕಾಲೇಜಿಗೆ ತೆರಳಿ ವಾಪಾಸು ಕೃಷ್ಣಾಪುರಕ್ಕೆ ಹೋಗುತ್ತಿದ್ದ ವೇಳೆ ಬೈಕ್ ಸವಾರ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿತ್ತು. ಈ ವೇಳೆ ಶಿಬಾ ರಸ್ತೆಗೆ ಎಸೆಯಲ್ಪಟ್ಟಿದ್ದು, ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಈಕೆಯ ಮೇಲೆ ಹರದು ಹೋಗಿದ್ದು, ಗಂಭೀರ ಗಾಯಗೊಂಡ ಈಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಈ ವೇಳೆ ಈಕೆ ಮೃತಪಟ್ಟರು ಎಂದು ತಿಳಿದುಬಂದಿದೆ.
ದ್ವಿತೀಯ ಪಿಯುಸಿ ಪೂರೈಸಿರುವ ಈಕೆ ತನ್ನ ಸಂಬಂಧಿ ಮುಹಮ್ಮದ್ ಮುಬಶ್ಶಿರ್ ಜತೆ ಬೈಕ್‌ನಲ್ಲಿ ನಿಟ್ಟೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಪ್ರವೇಶಕ್ಕೆ ಸಂಬಂಧಿಸಿ ವಿಚಾರಿಸಿ ವಾಪಾಸು ಮನೆಗೆ ತೆರಳುತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





