18 ಲಕ್ಷ ರೂ. ಮೌಲ್ಯದ ಅಡಿಕೆ, ಕಾಳು ಮೆಣಸು ಕಳವು
ಕೊಲ್ಲೂರು, ಮೇ 27: ಕೊಲ್ಲೂರು ಶ್ರೀಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಜಡ್ಕಲ್ ಶಾಖೆಯ ಗೋದಾಮಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಅಡಿಕೆ ಹಾಗೂ ಕಾಲು ಮೆಣಸುಗಳನ್ನು ಕಳವು ಮಾಡಿದ್ದಾರೆ.
ಜಡ್ಕಲ್‌ನಲ್ಲಿರುವ ಗೋದಾಮಿನ ಕಬಿಣ್ಣದ ಶೆಟರ್ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಡಿಕೆ ತುಂಬಿದ 133 ಚೀಲ ಮತ್ತು ಕಾಳು ಮೆಣಸು ತುಂಬಿದ ನಾಲ್ಕು ಚೀಲಗಳನ್ನು ಕಳವುಗೈದಿದ್ದಾರೆ.
ಇವುಗಳ ಒಟ್ಟು ಮೌಲ್ಯ 18,42,940 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಖಾ ವ್ಯವಸ್ಥಾಪಕ ವೆಂಕಟರಮಣ ಶರ್ಮ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





