ಆಸ್ಪತ್ರೆಗಳಲ್ಲಿನ ರೋಗಿಗಳು ಮತ್ತು ಜೊತೆಗಾರರಿಗೆ "ಇಫ್ತಾರ್", "ಸಹರಿ": ಇ-ಫ್ರೆಂಡ್ಸ್ ಗೆಳೆಯರ ಬಳಗದ ಮಾದರಿ ಕಾರ್ಯ

ಪುತ್ತೂರು, ಮೇ 27: ತಾಲೂಕಿನ ಸರಕಾರಿ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿರುವ ರೋಗಿಗಳು ಹಾಗೂ ಅವರೊಂದಿಗೆ ತಂಗುವವರಿಗೆ ರಮಝಾನ್ ತಿಂಗಳಿನಾದ್ಯಂತ "ಇಫ್ತಾರ್" ಹಾಗೂ "ಸಹರಿ" ವಿತರಿಸುವ ಇ-ಫ್ರೆಂಡ್ಸ್ ಗೆಳೆಯರ ಬಳಗದ ಮಾದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯುನಿಟಿ ಹಸನ್ ಹಾಜಿಯವರು ಇಫ್ತಾರ್ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅಬೂಬಕರ್ ಸಿದ್ದೀಕ್ ಜಲಾಲಿ, ಇ-ಫ್ರೆಂಡ್ಸ್ ಗೆಳೆಯರ ಬಳಗದ ಸೇವೆ ಜಿಲ್ಲೆಯ ಎಲ್ಲಾ ಯುವಕರಿಗೂ ಮಾದರಿ ಎಂದರು.
ಕಳೆದ ವರ್ಷ ಸರಕಾರಿ ಆಸ್ಪತ್ರೆ ಮತ್ತು ಕೆಲ ಸೀಮಿತ ಆಸ್ಪತ್ರೆಗಳಲ್ಲಿ ಇಫ್ತಾರ್ ಮತ್ತು ಸಹರಿ ವಿತರಿಸಿದ್ದ ಇ-ಫ್ರೆಂಡ್ಸ್ ಈ ಬಾರಿ ಎಲ್ಲಾ ಆಸ್ಪತ್ರೆಗಳನ್ನು ಯೋಜನೆಯಲ್ಲಿ ಸೇರಿಸಿರುವುದು ಅಭಿನಂದನಾರ್ಹ. ತಾವೂ ವ್ರತಾಚರಣೆಯಲ್ಲಿದ್ದು, ಇತರರಿಗೂ ಸಹಾಯ ಮಾಡುವ ಇ ಫ್ರೆಂಡ್ಸ್ ನ ಕಾರ್ಯ ಎಲ್ಲರಿಗೂ ಮಾದರಿ ಎಂದು ಪುತ್ತೂರು ಜುಮಾ ಮಸೀದಿಯ ಖತೀಬ್ ಎಸ್.ಬಿ.ದಾರಿಮಿ ಹೇಳಿದರು.
ಈ ಸಂದರ್ಭ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ್ ಕುಮಾರ್, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅದ್ದು ಹಾಜಿ, ಉಪಾಧ್ಯಕ್ಷ ಯಾಕೂಬ್ ಹಾಜಿ ದರ್ಬೆ, ಕಾರ್ಯದರ್ಶಿ ಎಲ್.ಟಿ.ರಝಾಕ್ ಹಾಜಿ, ಕಲ್ಲೇಗ ಜಮಾಅತ್ ಅಧ್ಯಕ್ಷ ಶಕೂರ್ ಹಾಜಿ, ಪಿ.ಎಫ್.ಐ. ಪುತ್ತೂರು ಜಿಲ್ಲಾಧ್ಯಕ್ಷ ರಿಝ್ವಾನ್, ಹುಸೈನ್ ಕೆನರಾ, ಝಾಕಿರ್ ಹನೀಫ್, ಇಬ್ರಾಹೀಂ ಅಲೆಕ್ಕಾಡಿ, ವಿ ಬಿಲ್ಡ್ ಸಿರಾಜ್ ಫ್ಯಾನ್ಸಿ ಕೋಟೇಜ್, ಅಬ್ದುರ್ರಹ್ಮಾನ್ ಅಝಾದ್, ಅಬ್ಬಾಸ್ ಮುರ, ರಶೀದ್ ಹಾಜಿ ಗೋಳಿಕಟ್ಟೆ, ವಿ.ಕೆ.ಶರೀಫ್, ಹನೀಫ್ ಮುದ್ದೋಡಿ, ಇಸಾಕ್ ಸಾಲ್ಮರ, ನಝೀರ್ ಬಲ್ನಾಡ್, ಕೆವೈಪಿ ಶಾಫಿ, ಡಾ.ಸರ್ಫರಾಝ್ ರಫೀಕ್ ರಾಯಲ್, ಅಶ್ಫಾಕ್ ಬಪ್ಪಳಿಗೆ ಉಪಸ್ಥಿತರಿದ್ದರು.
ಸಂಶುದ್ದೀನ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.







